ಶ್ರೀ ವ್ಯಾಸತತ್ವಜ್ಞತೀರ್ಥರು (1704-1800)
``ವಾಸುದೇವವಿಠಲ' ಎಂಬ ಅಂಕಿತದಿಂದ ಕನ್ನಡದಲ್ಲಿ ಕೀರ್ತನೆಗಳನ್ನು ರಚಿಸಿರುವ ವ್ಯಾಸತತ್ವಜ್ಞತೀರ್ಥರ ಪೂರ್ವಾಶ್ರಮದ ಹೆಸರು `ವೆಂಕಟರಾಮಾಚಾರ್ಯ’. ಇವರ ಜನ್ಮಸ್ಥಳ ಗದ್ವಾಲ ಸಂಸ್ಥಾನಕ್ಕೆ ಸೇರಿದ ``ಐಜಿ' ಎಂಬ ಗ್ರಾಮ. ಇವರ ಪೂರ್ವೀಕರು ಮೂಲತಃ ರಾಯಚೂರು ಜಿಲ್ಲೆಯ ದಿನ್ನೆ ಎಂಬ ಗ್ರಾಮದವರು. ದಿನ್ನೆ ಗ್ರಾಮದ ಪಂಡಿತ ಜನಾರ್ಧನಾಚಾರ್ಯ ಎಂಬುವರು ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡಿ ಬಂದು ಗದ್ವಾಲದ ರಾಜರ ವಿದ್ವತ್ ಸಭೆಯಲ್ಲಿ ರಾಜಮನ್ನಣೆಗೆ ಪಾತ್ರರಾಗಿದ್ದವರು. ಐಜಿ ಗ್ರಾಮದ ಜನರ ಪ್ರಾರ್ಥನೆಯಂತೆ ಜನಾರ್ಧನಾಚಾರ್ಯರು ಐಜಿ ಗ್ರಾಮದಲ್ಲಿ ನೆಲೆಸಿದರು. ಉತ್ತಮ ಪಂಡಿತರು, ಘನ ವಿದ್ವಾಂಸರು ಎನಿಸಿಕೊಂಡು ಅನೇಕ ಶಿಷ್ಯರಿಗೆ ಪಾಠ ಹೇಳುತ್ತಿದ್ದರು. ಈ ಜನಾರ್ಧನಾಚಾರ್ಯರ ಮಕ್ಕಳು ವೆಂಕಟನರಸಿಂಹಾಚಾರ್ಯರು. ತಮ್ಮ ತಂದೆಯವರ ಬಳಿಯೇ ವಿದ್ಯಾಭ್ಯಾಸ ಮಾಡಿ ಶಾಸ್ತ್ರ ಪಾಂಡಿತ್ಯವನ್ನು ಸಂಪಾದಿಸಿ ಶ್ರೇಷ್ಠ ದರ್ಜೆಯ ವಿದ್ವಾಂಸರಾಗಿದ್ದರು. ಗದ್ವಾಲ ಸಂಸ್ಥಾನದಿಂದ ರಾಜಮನ್ನಣೆ ಪಡೆದಿದ್ದರು. ಆಪಸ್ಥಂಭ ಶಾಖೆಯ ಕೌಶಿಕ ಗೋತ್ರಜರಾದ ವೆಂಕಟನರಸಿಂಹಾಚಾರ್ಯರ ಏಕೈಕ ಪುತ್ರ ವೆಂಕಟರಾಮಾಚಾರ್ಯರು.
ವೆಂಕಟರಾಮಾಚಾರ್ಯರು ಜನಿಸಿದ್ದು 1704 ರಲ್ಲಿ. ಎಳೆಯ ವಯಸ್ಸಿನಲ್ಲಿ ತುಂಬಾ ಮುಗ್ಧನಂತೆ ವರ್ತಿಸುತ್ತಾ, ಯಾವ ವಿಷಯದಲ್ಲೂ ಆಸಕ್ತಿಯಿಲ್ಲದೆ ಜಡಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದ ಮಗನ ನಡವಳಿಕೆ ತಂದೆತಾಯಿಗಳಿಗೆ ಆತಂಕವನ್ನುಂಟುಮಾಡಿತ್ತು. ಮದುವೆಯಾದ ಮೇಲಾದರೂ ಮಗನ ಸ್ವಭಾವ ಬದಲಾಗಬಹುದೆಂದು ತಂದೆತಾಯಿಗಳು ಭಾವಿಸಿದರು. ಹದಿನೆಂಟನೆಯ ವಯಸ್ಸಿಗೆ ಮದುವೆ ಮಾಡಿದರು. ಒಂದು ಹೆಣ್ಣು ಮಗುವಿನ ತಂದೆಯಾದ ಮೇಲೂ ತಮ್ಮ ಮಗನ ಮುಗ್ಧಭಾವ ಬದಲಾಗಲಿಲ್ಲ. ತಂದೆ ತಾಯಿಗಳು ಹೆಚ್ಚಿನ ಚಿಂತೆಗೆ ಒಳಗಾದರು. ಐಜಿ ಗ್ರಾಮಕ್ಕೆ ಸಮೀಪದಲ್ಲೇ ಇದ್ದ ಉತ್ತನೂರು ಗ್ರಾಮದಲ್ಲಿ ಗೋಪಾಲದಾಸರು ವಾಸವಾಗಿದ್ದರು. ಗೋಪಾಲದಾಸರು ಜೋತಿಷ್ಯ, ಭವಿಷ್ಯಗಳನ್ನು ಹೇಳುವುದರಲ್ಲಿ ಆ ಕಾಲದಲ್ಲಿ ಪ್ರಸಿದ್ಧರಾಗಿದ್ದರು. ವೆಂಕಟ ನರಸಿಂಹಾಚಾರ್ಯರು ತಮ್ಮ ಪತ್ನಿಯ ಸೂಚನೆಯಂತೆ ಮಗನನ್ನು ಕರೆದುಕೊಂಡು ಉತ್ತನೂರಿಗೆ ಬಂದರು. ತಮ್ಮ ಮಗನ ವರ್ತನೆಯನ್ನು ವಿವರಿಸಿ ಅವನ ಭವಿಷ್ಯದ ಬಗ್ಗೆ ಪ್ರಶ್ನಿಸಿದರು. ಮಗನ ಬಗ್ಗೆ ಚಿಂತಿಸುವ ಅಗತ್ಯವಿಲ್ಲವೆಂದು ಗೋಪಾಲದಾಸರು ಭರವಸೆ ನೀಡಿದರು. ``ಪ್ರತಿನಿತ್ಯವೂ ಮಗನನ್ನು ಜೊತೆಯಲ್ಲಿಯೇ ಕೂಡಿಸಿಕೊಂಡು ಎಲ್ಲಾ ಶಾಸ್ತ್ರಗ್ರಂಥಗಳನ್ನು ಪಾರಾಯಣ ಮಾಡುತ್ತಾ ಬನ್ನಿ. ಸ್ವಯಂ ಪ್ರತಿಭೆಯಿಂದ ಅವನು ವಿದ್ಯಾ- ಪಾರಂಗತನಾಗುತ್ತಾನೆ' ಎಂದು ತಿಳಿಸಿದರು. ಅವರ ಸಲಹೆ ಸೂಚನೆಗಳನ್ನು ಅನುಸರಿಸಿ ಆಚಾರ್ಯರು ಪ್ರತಿನಿತ್ಯವೂ ಮಗನ ಎದುರಿನಲ್ಲಿ ಶಾಸ್ತ್ರಗ್ರಂಥಗಳನ್ನು ಪಠಣ ಮಾಡತೊಡಗಿದರು. ಅನತಿ ಕಾಲದಲ್ಲಿಯೇ ವೆಂಕಟರಾಮಾಚಾರ್ಯರ ಜಡತೆ ಮಾಯವಾಯಿತು. e್ಞÁನಜ್ಯೋತಿ ಬೆಳಗತೊಡಗಿತು. ಪ್ರತಿಭಾ ಸಂಪನ್ನರಾಗಿ ವೇದ, ವೇದಾಂಗ ಶಾಸ್ತ್ರ ಪಂಡಿತರೆನಿಸಿಕೊಂಡರು. ದ್ವೈತ ಸಿದ್ಧಾಂತಲ್ಲಿ ವಿಚಾರಶೀಲ ಬುದ್ಧಿಯನ್ನು ಬೆಳೆಸಿಕೊಂಡು ಅನೇಕ ಶಿಷ್ಯರನ್ನು ಸಂಪಾದಿಸಿ- ಕೊಂಡರು. ಇವರ ಪಾಂಡಿತ್ಯ ಮತ್ತು ಪಾಠ ಪ್ರವಚನಗಳ ಶ್ರೇಷ್ಠತೆಯನ್ನು ಅರಿತು ದೂರದ ಊರುಗಳಿಂದಲೂ ಹಲವಾರು ಮಂದಿ ಶಿಷ್ಯವೃತ್ತಿಯನ್ನು ಅರಸಿ ಬಂದರು. ತಮ್ಮ ಪಾಠ ಪ್ರವಚನಗಳಿಗೆ ಸೂಕ್ತವಾದ ಪ್ರಶಾಂತ ಸ್ಥಳವನ್ನು ಅಪೇಕ್ಷಿಸಿ ವೆಂಕಟರಾಮಾಚಾರ್ಯರು ಐಜಿಯನ್ನು ಬಿಟ್ಟು ಬೀಚಪಲ್ಲಿ ಎಂಬ ಗ್ರಾಮಕ್ಕೆ ಬಂದು ನೆಲೆಸಿದರು. ಐಜಿ ಗ್ರಾಮದಿಂದ ಬಂದವರಾದ ಕಾರಣ ಜನ ಇವರನ್ನು ಐಜಿ ಆಚಾರ್ಯರೆಂದೇ ಕರೆಯುತ್ತಿದ್ದರು. ``ಬೀಚಪಲ್ಲಿ' ಗದ್ವಾಲಕ್ಕೆ ಸಮೀಪದಲ್ಲಿ ಕೃಷ್ಣಾನದಿ ತೀರದಲ್ಲಿದೆ. ವ್ಯಾಸರಾಜ ಯತಿಗಳು ಪ್ರತಿಷ್ಠಾಪಿಸಿದ ಪ್ರಾಣದೇವರ ದೇವಾಲಯವಿದೆ. ಈ ಪ್ರಾಣದೇವರ ಸನ್ನಿಧಿಯಲ್ಲಿ ತಮ್ಮ ದಿನನಿತ್ಯದ ಜಪಾನುಷ್ಠಾನ, ಪಾಠ ಪ್ರವಚನ ಇವುಗಳಲ್ಲಿ ನಿರತರಾಗಿ ವೆಂಕಟರಾಮಾಚಾರ್ಯರು ಸಂಸ್ಕøತದಲ್ಲಿ ಅನೇಕ ಶಾಸ್ತ್ರಗ್ರಂಥಗಳನ್ನು ರಚಿಸಿದರು. ನೂರಾರು ಮಂದಿ ಶಿಷ್ಯರನ್ನು ಸಂಪಾದಿಸಿದರು. ಇದೇ ಅವಧಿಯಲ್ಲಿ ``ವಾಸುದೇವವಿಠಲ' ಎಂಬ ಅಂಕಿತದಿಂದ ಕನ್ನಡದಲ್ಲಿ ಪದ ಸುಳಾದಿಗಳನ್ನು ರಚಿಸಿದರು. ಹನ್ನೆರಡು ವರ್ಷಗಳ ಕಾಲ ಬೀಚಪಲ್ಲಿಯಲ್ಲಿ ನೆಲೆಸಿ ಅನಂತರ ತುಂಗಭದ್ರಾ ತೀರದ ವೇಣೀಸೋಮಪುರಕ್ಕೆ ಆಗಮಿಸಿದರು. ಗದ್ವಾಲದ ರಾಜನಾದ ಸೋಮಭೂಪಾಲ ಆಚಾರ್ಯರಿಗೆ ಅಗತ್ಯವಾದ ವಸತಿ ಸೌಕರ್ಯವನ್ನು ಕಲ್ಪಿಸಿಕೊಟ್ಟ. ಗ್ರಂಥರಚನೆ, ಶಾಸ್ತ್ರಗ್ರಂಥಗಳ ಪಾಠಪ್ರವಚನ, ದೇವತಾರ್ಚನೆ ಇವುಗಳಲ್ಲಿ ನಿರತರಾದ ವೆಂಕಟರಾಮಾಚಾರ್ಯರು ವೇಣೀಸೋಮಪುರವನ್ನು ಪಂಡಿತರ ಅಗ್ರಹಾರವನ್ನಾಗಿ ಮಾಡಿದರು. ಈ ನಡುವೆ ಇವರಿಗೆ ಪತ್ನೀ ವಿಯೋಗವಾಗಿ ಎರಡನೆಯ ಲಗ್ನವನ್ನು ಮಾಡಿಕೊಂಡರು.
ಐಜಿ ಆಚಾರ್ಯರಲ್ಲಿ ಶಾಸ್ತ್ರಾಭ್ಯಾಸ ಮಾಡಲು ಗೋಪಾಲದಾಸರ ತಮ್ಮಂದಿರಾದ ಸೀನಪ್ಪದಾಸರು (ಗುರುಗೋಪಾಲವಿಠಲ) ದಾಸಪ್ಪದಾಸರು (ವರದ ಗೋಪಾಲವಿಠಲ) ಮತ್ತು ರಂಗಪ್ಪದಾಸರು (ತಂದೆಗೋಪಾಲವಿಠಲ) ವೇಣೀಸೋಮಪುರಕ್ಕೆ ಬಂದು ನೆಲೆಸಿದರು. ಅರಣ್ಯಕಾಚಾರ್ಯ ಅಥವ ಅಡವಿ ಆಚಾರ್ಯರೆಂದು ಪ್ರಸಿದ್ಧರಾದ ವಿಷ್ಣುತೀರ್ಥರು ಕೂಡ ಐಜಿ ಆಚಾರ್ಯರ ಶಿಷ್ಯರಾದರು. ಆಚಾರ್ಯರ ಬಳಿ ಆಗ ಮುನ್ನೂರು ಮಂದಿ ಶಿಷ್ಯರು ಅಭ್ಯಾಸ ಮಾಡುತ್ತಿದ್ದರಂತೆ. ಐಜಿ ಆಚಾರ್ಯರ ಕೀರ್ತಿ ಎಲ್ಲಾ ಕಡೆಗಳಲ್ಲಿ ವ್ಯಾಪಿಸಿತ್ತು. ಅವರ ಶಿಷ್ಯ ಪ್ರಶಿಷ್ಯರ ಶಾಖೋಪಶಾಖೆಗಳು ಬೆಳೆಯುತ್ತಿದ್ದವು. ಶಿಷ್ಯರ ಪಾಲಿಗೆ ಅವರು ಕಲ್ಪವೃಕ್ಷದಂತೆ ವಿರಾಜಮಾನರಾಗಿದ್ದರೆಂದು ವಿಷ್ಣುತೀರ್ಥರು ಸ್ತುತಿಸುತ್ತಾರೆ.
ದಿಕ್ ಪ್ರಾಂತಾ ತತ ಪುಣ್ಯಕೀರ್ತಿ ಸುಲತಾ ಸಂಶೋಭಿತಸ್ಸಂತತಂ
ನಾನಾಶಿಷ್ಯ ತದೀಯ ಶಿಷ್ಯವಿಲಸ
ಚ್ಚಾಖೋಪ ಶಾಖಾನ್ವಿತಃ ||
ಐಜೀ ವೆಂಕಟನಾರಸಿಂಹದಯಿತಾ
ದಿವ್ಯಾಲವಾಲೋದ್ಭವ||ಃ
ಸಂಭೂಯಾತ್ಸಕಲೇಷ್ಟದೋಮಮಸದಾ
ರಾಮಾರ್ಯ ಕಲ್ಪದ್ರ್ರುಮ||ಃ
ವೇಣೀಸೋಮಪುರದ ಸಮೀಪ ``ವಲ್ಲೂರು' ಎಂಬ ಗ್ರಾಮಕ್ಕೆ ಆಚಾರ್ಯರು ಆಗಾಗ ಪ್ರವಚನಕ್ಕೆ ಹೋಗುತ್ತ್ತಿದ್ದರು. ಸ್ವಪ್ನ ಸೂಚನೆಯಂತೆ ವಲ್ಲೂರು ಕೆರೆಯ ತೂಬಿನ ಕೆಳಗೆ ದೊರೆತ ಎರಡು ಗೋಪಾಲಕೃಷ್ಣ ವಿಗ್ರಹಗಳಲ್ಲಿ ಒಂದನ್ನು ವಲ್ಲೂರಿನಲ್ಲಿ ಮತ್ತೊಂದನ್ನು ವೇಣೀಸೋಮಪುರದಲ್ಲಿ ಸ್ಥಾಪಿಸಿದರು. ಗದ್ವಾಲ ರಾಜರ ಸಹಕಾರದಿಂದ ದೇವಸ್ಥಾನವನ್ನು ನಿರ್ಮಿಸಿದರು. ಆಚಾರ್ಯರ ಶಿಷ್ಯ ಮಂಡಲಿಗೆ, ವಿದ್ವಜ್ಜನರಿಗೆ, ಹರಿದಾಸರಿಗೆ ಆಶ್ರಯಸ್ಥಾನವಾದ ವೇಣುಗೋಪಾಲನ ದೇವಾಲಯ ಒಂದು ಹರಿದಾಸರ ಕೇಂದ್ರವೇ ಆಯಿತು. ``ನಂದವ್ರಜ ದ್ವಾರಕಾಪುರಿ ಬಿಟ್ಟು ಬಂದದ್ದೇ ಬಹು ಲಾಭವು ' ಎಂಬ ಕೀರ್ತನೆಯಲ್ಲಿ ಗುರುಗೋಪಾಲ ದಾಸರು ವೇಣೀಸೋಮಪುರಕ್ಕೆ ಬಂದು ನೆಲಸಿದ ಪರಮಾತ್ಮನ ಬಾಲಲೀಲೆಗಳನ್ನು ಚಿತ್ರಿಸಿದ್ದಾರೆ. ವೇಣೀಸೋಮಪುರ ಪರಮಾತ್ಮನ ವಾಸಸ್ಥಾನಕ್ಕೆ ಯೋಗ್ಯವಾದ ಅತ್ಯಂತ ರಮ್ಯ ಸ್ಥಳವೆಂದು ತಿಳಿಸಿ ಸತಿಸುತ ಪರಿವಾರ ಜನರೊಂದಿಗೆ ಸ್ಥಿರವಾಗಿ ನೆಲಸಬೇಕೆಂದು, ಗುರುವರ್ಯ ವೆಂಕಟರಾಮಾಚಾರ್ಯರಿಂದ ಪರಿಪರಿಯ ಪೂಜೆಯನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸಿದ್ದಾರೆ. ``ಐಜಿ ಆಚಾರ್ಯರು ಗುಣವಂತರು, ಅವರು ಮಣೆಗಾರರಂತೆ ದೇವರನ್ನು ಅದು ಇದು ಕೊಡು ಎಂದು ಬೇಡುವವರಲ್ಲ, ಆದರೆ ಋಣತ್ರಯಗಳಲ್ಲಿ ಪಿತೃಋಣ ಮಾತ್ರ ಹಾಗೇ ಉಳಿದಿದೆ. ಆದ್ದರಿಂದ ಅವರಿಗೆ ಪುತ್ರಸಂತಾನವನ್ನು ನೀಡಿ ಪಿತೃಋಣವನ್ನು ಪರಿಹರಿಸು' ಎಂದು ಗುರುಗೋಪಾಲದಾಸರು ವೇಣುಗೋಪಾಲನಲ್ಲಿ ವಿe್ಞÁಪಿಸಿಕೊಂಡಿದ್ದಾರೆ. ಆಚಾರ್ಯರಿಗೆ ನಡುವಯಸ್ಸು ಮೀರುತ್ತಾ ಬಂದಿತ್ತು. ಎರಡನೆಯ ಪತ್ನಿಯಲ್ಲೂ ಪುತ್ರರು ಜನಿಸಲಿಲ್ಲ. ಪುತ್ರ ಸಂತಾನದ ಅಪೇಕ್ಷೆ ಪ್ರಬಲವಾಗತೊಡಗಿತು (ಕೀ. 93)
ವೆಂಕಟರಾಮಾಚಾರ್ಯರ ಮೊದಲ ಪತ್ನಿಗೆ ಲಕ್ಷಮ್ಮ ಎಂಬ ಹೆಣ್ಣು ಮಗಳಿದ್ದಳು. ಆಕೆಗೆ ಯುಕ್ತ ವಯಸ್ಸಿನಲ್ಲಿ ಲಗ್ನವಾಗಿ ಇಬ್ಬರು ಮಕ್ಕಳು ಜನಿಸಿದ್ದರು. ಅವರಲ್ಲಿ ಗೋಪಾಲಕೃಷ್ಣಾಚಾರ್ಯ ಎಂಬ ಮಗನನ್ನು ಆಚಾರ್ಯರು ದತ್ತು ಸ್ವೀಕರಿಸಿದರು. ಗೋಪಾಲಕೃಷ್ಣಾಚಾರ್ಯರೂ ಕೂಡ ತಮ್ಮ ದತ್ತು ತಂದೆಯಂತೆಯೇ ಭಗವದ್ಭಕ್ತರು, ಪಂಡಿತೋತ್ತಮರು ಆಗಿದ್ದರು. ಅನೇಕ ಶಿಷ್ಯರಿಗೆ ಶಾಸ್ತ್ರಪಾಠವನ್ನು ಹೇಳುತ್ತಿದ್ದರು. ``ತಂದೆ ವಾಸುದೇವವಿಠಲ' ಎಂಬ ಅಂಕಿತದಲ್ಲಿ ಕೀರ್ತನೆಗಳನ್ನು ರಚಿಸಿದ್ದಾರೆ.
ತಮ್ಮ ಎಪ್ಪತ್ತಾರನೆಯ ವಯಸ್ಸಿನಲ್ಲಿ ಐಜಿ ಆಚಾರ್ಯರು ವಾನಪ್ರಸ್ಥಾಶ್ರಮ ವನ್ನು ಸ್ವೀಕರಿಸಿದರು. ತುಂಗಭದ್ರಾನದಿಯ ದಂಡೆಯಲ್ಲಿ ಕುಟೀರವನ್ನು ನಿರ್ಮಿಸಿ ಗೆಡ್ಡೆಗೆಣಸುಗಳನ್ನು ಸೇವಿಸುತ್ತಾ ಜೀವಿಸಿದರು. ಪಾಠ ಪ್ರವಚನಗಳ ಜೊತೆಗೆ ದೇವತಾ ಕಾರ್ಯಗಳನ್ನು ಮುಂದುವರಿಸಿದರು. ಅದೇ ಕಾಲದಲ್ಲಿ ರಾಘವೇಂದ್ರ ಮಠದ ಪೀಠಾಧಿಪತಿಗಳಾಗಿದ್ದ ಭುವನೇಂದ್ರತೀರ್ಥರು ವೇಣೀಸೋಮಪುರಕ್ಕೆ ಬಂದರು. ಆಚಾರ್ಯರು ಶ್ರೀಪಾದಂಗಳನ್ನು ಭೇಟಿಯಾಗಿ ತಮಗೆ ಯತ್ಯಾಶ್ರಮವನ್ನು ನೀಡಲು ಪ್ರಾರ್ಥಿಸಿದರು. ಶ್ರೀಪಾದಂಗಳ ಸೂಚನೆಯಂತೆ ಭಾಗವತ ಸಪ್ತಮ ಸ್ಕಂದಕ್ಕೆ ``ಮಂದನಂದಿನಿ' ಎಂಬ ಟೀಕೆಯನ್ನು ರಚಿಸಿ ಗುರುಗಳಿಗೆ ಸಮರ್ಪಿಸಿದರು. ಭುವನೇಂದ್ರತೀರ್ಥರು ತತ್ವಜ್ಞರಾದ ಆಚಾರ್ಯರಿಗೆ ``ವ್ಯಾಸತತ್ವಜ್ಞತೀರ್ಥ' ಎಂಬ ಅನ್ವರ್ಥ ನಾಮಕರಣ ಮಾಡಿ ಯತ್ಯಾಕ್ರಮ ನೀಡಿದರು.
``ಕವಿ ಭಿರೀಡಿತ ಮಹಾಮುನಿ ವ್ಯಾಸಕೃತ ಸುಭಾ-
ಗವತಾದಿ ಗ್ರಂಥ ವ್ಯಾಖ್ಯಾನ ನೋಡಿ |
ಭುವನೇಂದ್ರರಾಯ ತಾ ಕರುಣದಲಿ ತುರಿಯಾಶ್ರ
ಮವನಿತ್ತು ವ್ಯಾಸ ತತ್ವಜ್ಞರಹುದೆಂದ || '
ಎಂದು ಜಗನ್ನಾಥದಾಸರು ಸ್ತುತಿಸಿದ್ದಾರೆ. ಸನ್ಯಾಸವನ್ನು ಸ್ವೀಕರಿಸಿದ ಮೇಲೆ ಪೀಠಾಧಿಪತ್ಯವನ್ನು ವಹಿಸಿಕೊಳ್ಳಲು ಅಪೇಕ್ಷೆಪಡದ ವ್ಯಾಸತತ್ವಜ್ಞರು ಕೆಲವು ಕಾಲ ತಮ್ಮ ಗುರುಗಳ ಸನ್ನಿಧಿಯಲ್ಲಿ ಮಂತ್ರಾಲಯದಲ್ಲಿ ವಾಸ ಮಾಡಿದರು. ಅನಂತರ ವೇಣೀಸೋಮಪುರಕ್ಕೆ ಹಿಂತಿರುಗಿದರು. ಪೀಠಾಧಿಪತ್ಯದ ಪದವಿ ಪ್ರತಿಷ್ಠೆಗಳಿಗೆ ಹಂಬಲಿಸದೆ, ವೇಣೀಸೋಮಪುರದ ಪ್ರಶಾಂತ ಪರಿಸರದಲ್ಲಿ ಹರಿದಾಸರ ಸಂಗದಲ್ಲಿ ಜಪತಪ ಪೂಜಾದಿಗಳಲ್ಲಿ ನಿರತರಾದರು. ಸನ್ಯಾಸಾಶ್ರಮವನ್ನು ಸ್ವೀಕರಿಸಿದಾಗ ವ್ಯಾಸತತ್ವಜ್ಞರಿಗೆ ಸುಮಾರು ಎಪ್ಪತ್ತೆಂಟು ವರ್ಷ ವಯಸ್ಸಾಗಿತ್ತು. ``ಏಳು ಮನೆಗಳನ್ನು ಬೇಡುವ ಯತಿಧರ್ಮ' ವನ್ನು ಕೂಡ ಮಾಡಲು ಸಾಧ್ಯವಾಗದ ವ್ಯದ್ಧಾಪ್ಯ ಆವರಿಸಿತ್ತು. ``ಏಳಲಾರೆನು ವೃದ್ಧ ಕೇಳಲಾರೆ' ಎಂಬ ಪರಿಸ್ಥಿತಿ ಒದಗಿತ್ತು. ವೈರಾಗ್ಯದ ತುತ್ತತುದಿಗೇರಿದ ಅವರು ಬಯಸಿದ್ದು ``ವಾಸುದೇವವಿಠಲನ ಒಲುಮೆ'ಯೊಂದನ್ನು ಮಾತ್ರ.
ವ್ಯಾಸತತ್ವಜ್ಞರು ``ಪವಾಡಪುರುಷ'ರೆಂದೇ ಆ ಕಾಲದ ಜನ ನಂಬಿದ್ದರು. ಅವರ ಪೂರ್ವಾಶ್ರಮ ಮತ್ತು ಯತ್ಯಾಶ್ರಮಗಳೆರಡರಲ್ಲೂ ಹಲವಾರು ಪವಾಡಗಳು ಅವರ ಜೀವನ ಚರಿತ್ರೆಯ ಅವಿಭಾಜ್ಯ ಭಾಗಗಳಂತೆ ಹೆಣೆದುಕೊಂಡಿವೆ. ಕನಸಿನಲ್ಲಿ ಕಾಣಿಸಿಕೊಂಡ ವೇಣುಗೋಪಾಲನನ್ನು ವೇಣಿಸೋಮಪುರದಲ್ಲಿ ಪ್ರತಿಷ್ಠಾಪಿಸಿದ್ದು, ಮಗನಿಗೆ ಬಂದ ಅಪಮೃತ್ಯುವನ್ನು ಪರಿಹರಿಸಿದ್ದು, ಅಡವಿ ಆಚಾರ್ಯರಿಗೆ ತೋರಿದ ಅನುಗ್ರಹ, ನೀರಿನ ನರಸಪ್ಪನಿಂದ ವಾಕ್ಯಾರ್ಥ ಮಾಡಿಸಿದ್ದು, ಮುಡಮಾಲಿ ಗ್ರಾಮದ ದೇಸಾಯಿಯ ರೋಗವನ್ನು ನಿವಾರಿಸಿದ್ದು, ತುಂಗಭದ್ರಾ ನದಿಯನ್ನು ಮನೆಯವರೆಗೂ ಬರಮಾಡಿಕೊಂಡದ್ದು, ಗೋಪಾಲಕೃಷ್ಣನ ಸಂದರ್ಶನ ಮಾಡಿ ಹಾಡಿದ್ದು, ಹಂಪೆಯ ವಿರೂಪಾಕ್ಷ ರಥವನ್ನು ರಕ್ಷಿಸಿದ್ದು, ಗದ್ವಾಲ ರಾಜನ ಆಪತ್ತು ಪರಿಹರಿಸಿದ್ದು, ಹೀಗೆ ಹಲವಾರು ಪವಾಡಗಳನ್ನು ವ್ಯಾಸತತ್ವಜ್ಞರ ಜೀವನ ಚರಿತ್ರೆಗೆ ಹೊಂದಿಸಲಾಗಿದೆ. ಅವರು ತೋರಿದರೆನ್ನಲಾದ ಅಸಂಖ್ಯಾತ ಮಹಿಮೆಗಳು ಹೊರನೋಟಕ್ಕೆ ಪವಾಡಗಳಂತೆ ಕಂಡರೂ ಅವರು ಪ್ರತಿಷ್ಠೆಗಾಗಿ ಪ್ರಚಾರ ಮಾಡಿದ್ದವು ಅಲ್ಲ. ತೀರ ಸಹಜವೆಂಬಂತೆ ಅವರು ತೋರಿದ ಕರುಣೆಯು ಪವಾಡಗಳೆನಿಸಿಕೊಂಡವು. ತೊಂಭತ್ತಾರು ವರ್ಷಗಳ ತುಂಬು ಬಾಳು ನಡೆಸಿದ ವ್ಯಾಸತತ್ವಜ್ಞತೀರ್ಥರು ರೌದ್ರಿ ಸಂವತ್ಸರದ ಶ್ರಾವಣ ಬಹುಳ ಅಷ್ಟಮಿ (1800) ಸ್ವರ್ಗಸ್ಥರಾದರೆಂದು ಜಗನ್ನಾಥದಾಸರು ತಿಳಿಸುತ್ತಾರೆ.
ವ್ಯಾಸತತ್ವಜ್ಞರು ತಮ್ಮ ಸಮಕಾಲೀನ ಸಮಾಜದಲ್ಲಿ ಉಚ್ಛಶ್ರೇಣಿಯ ಪಂಡಿತರಾಗಿಯೂ, ದೈವಭಕ್ತರಾಗಿಯೂ, ಯತಿಶ್ರೇಷ್ಠರಾಗಿಯೂ ಮಾನ್ಯತೆ ಪಡೆದಿದ್ದರು.
``ಭೂಮಂಡಲದೊಳಗುಳ್ಳ ಸಕಲ ತೀರ್ಥಸ್ನಾನ
ಹೇಮಾದ್ರಿ ಮೊದಲಾದ ಕ್ಷೇತ್ರಯಾತ್ರೆ
ನೇಮ ಜಪತಪ ವ್ರತಾದಿಗಳ ಮಾಡಿದ ಪುಣ್ಯ
ಈ ಮಹಾತ್ಮರ ಕಂಡ ಮಾತ್ರದಿ ಸಮನಿಸಿತು '
ಎಂದು ಜಗನ್ನಾಥದಾಸರು ಹೇಳಿದ್ದಾರೆ.
``ಚಿಂತಿಸುಪ್ಪರ ಚಿಂತಾರ್ಥಗಳೆಲ್ಲ
ಚಿಂತಾಮಣಿಯಂತೆ ಸಂತೈಸುತಲಿರುವ
ವರದಗೋಪಾವಿಠಲ ಇವರಲಿ ನಿಂತು
ವರವ ಕೊಡುವೆನೆಂದು ಕರೆಯುತಲಿರುವ'
ಎಂದು ವರದ ಗೋಪಾಲವಿಠಲರು ತಿಳಿಸುತ್ತಾರೆ.
ವ್ಯಾಸತತ್ವಜ್ಞರು ``ವಾಸುದೇವವಿಠಲ' ಎಂಬ ಅಂಕಿತವನ್ನು ತಮ್ಮ ಪೂರ್ವಾಶ್ರಮದಲ್ಲೇ ಸ್ವೀಕರಿಸಿದ್ದರು. ಸನ್ಯಾಸ ಸ್ವೀಕರಿಸಿದ ಮೇಲೂ ಅದೇ ಅಂಕಿತದಲ್ಲಿ ಕೀರ್ತನೆಗಳ ರಚನೆಯನ್ನು ಮುಂದುವರೆಸಿದರು. ವಾಸುದೇವ- ವಿಠಲ ಅಂಕಿತದಲ್ಲಿ ದೊರೆತಿರುವ ಪದ, ಸುಳಾದಿ, ಮತ್ತು ಉಗಾಭೋಗಗಳು ಸುಮಾರು ತೊಂಭತ್ತು. ಹರಿದಾಸರ ಸಾಂಪ್ರದಾಯಿಕ ರಚನೆಗಳಂತೆಯೇ ವಾಸುದೇವವಿಠಲರ ಕೃತಿಗಳಲ್ಲೂ ಆತ್ಮಶೋಧನೆಯ ನಿರೂಪಣೆ ಇದೆ.
1. ಅನಂತಾನಂತ ಪಾಪ ಮಾಡುವೆ ನಾನು (ಕೀ. 65)
2. ಅಪರಾಧ ಎನ್ನದಯ್ಯ ಅಪರಿಮಿತವೆ ಸರಿ (ಕೀ. 66)
3. ಎನ್ನ ಅಪರಾಧಂಗಳೆಣಿಸೆನೆಂದರೆ ಅದರ
ಕೊನೆಯಿಲ್ಲ ಮೊದಲಿಲ್ಲ ಹುರುಳಿಲ್ಲವೋ (ಕೀ. 87)
ಹೀಗೆ ಲೌಕಿಕ ಜೀವಿತದಲ್ಲಿ ಅರಿತೊ ಅರಿಯದೆಯೊ ಹಲವಾರು ತಪ್ಪುಗಳನ್ನು ಮಾಡಿದ್ದಾಗಿ ಒಪ್ಪಿಕೊಂಡೇ ಜೀವನವನ್ನು ಪರಿಶುದ್ಧಗೊಳಿಸಿಕೊಳ್ಳಲು ಬಯಸುತ್ತಾರೆ. ಅe್ಞÁನದಲ್ಲಿ ಮಾಡುವ ತಪ್ಪುಗಳನ್ನು ಕ್ಷಮಿಸುವ ಔದಾರ್ಯವಿರುವುದರಿಂದಲೇ ಶ್ರೀಹರಿಯನ್ನು ``ಕೃಪಣವತ್ಸಲ'ನೆನ್ನುತ್ತಾರೆ. ಹುಡುಗರು ಮಾಡುವ ತಪ್ಪನ್ನು ಜನನಿ ಮನ್ನಿಸುವಂತೆ, ನಡೆಯುವ ಕುದುರೆ ಮಲಗಿದರೆ ಅದನ್ನು ಉಪಚರಿಸುವಂತೆ ಕೃಪೆ ತೋರಬೇಕೆಂದು ಬೇಡುತ್ತಾರೆ. ಜೀವನದಲ್ಲಿ ಬೆಳಕೇ ಕಾಣದೆ ಸುತ್ತಲೂ ಕತ್ತಲೆ ಆವರಿಸಿ ಮಾರ್ಗದರ್ಶಕರೇ ದೊರೆಯದೆ ಹೋದಾಗ ಮುಂದೇನು ಗತಿಯೆಂದು ಜೀವ ತಳಮಳಿಸುತ್ತದೆ. ಇದೇ ಪರಿಸ್ಥಿತಿಯಲ್ಲಿದ್ದ ಹಲವರನ್ನು ರಕ್ಷಿಸಿದ್ದ ದೇವರು ಈಗೇಕೆ ಬರವಲ್ಲ ? ತನ್ನ ಮೊರೆಗೆ ಏಕೆ ಕಿವಿಗೊಡುತ್ತಿಲ್ಲ ? ತನ್ನನ್ನು ಕರುಣಾದೃಷ್ಟಿಯಿಂದ ಏಕೆ ನೋಡುತ್ತಿಲ್ಲ ಎಂಬ ಪ್ರಶ್ನೆಗಳು ಮೂಡುತ್ತವೆ. ತನ್ನ ಮೊರೆಯನ್ನು ದೇವರೇ ಕೇಳದೇ ಹೋದಾಗ
``ಆರಿಗೆ ಉಸುರಲಿ ಆರಿಗೆ ಮೊರೆಯಿಡಲಿ
ಆರೆನ್ನ ಮನದಳಲು ನಿವಾರಿಸುವವರ ಕಾಣೆ' (ಕೀ. 97)
ಎಂದು ಭಕ್ತ ಹತಾಶ ಸ್ಥಿತಿಯನ್ನು ತಲಪುತ್ತಾನೆ. ದೇಹ, ಮನಸ್ಸು ಮಾತುಗಳು ನಿಯಂತ್ರಣ ಕಳೆದುಕೊಳ್ಳುತ್ತವೆ. ದುರ್ವಿಷಯಗಳ ಕಡೆ ಆಕರ್ಷಿತವಾಗುವ ಮನದ ನಡತೆಯನ್ನು ತಿದ್ದಬೇಕೆಂದು ದಾಸರು ಪ್ರಾರ್ಥಿಸುತ್ತಾರೆ.
1. ತನುವಿನ ಮನಸಿನ ಒಡೆಯ ನೀನೆಂದು
ಮನಸಿಗೆ ಬಂದಂತೆ ವಚನಗಳಾಡುವೆ
ಮುನಿಸು ಮಾಡದೆ ನೀ ಕ್ಷಮೆ ಮಾಡಲಿಬೇಕು (ಕೀ. 70)
2. ದುರ್ವಿಷಯ ಬಿಡಿಸಿನ್ನು ವಾಸುದೇವ ವಿಠಲ
ಸರ್ವಬಗೆಯಲಿ ಪೊರೆಯೊ ನಿನ್ನವನು ನಾನು (ಕೀ. 70)
ಎಂದು ದೇವರಿಗೆ ಶರಣಾಗುತ್ತಾರೆ.
ಮನುಷ್ಯನ ಸ್ವಭಾವವೇ ತುಂಬಾ ಚಂಚಲವಾದದ್ದು, ದೇಹ ಕರಣಗಳು ಸ್ಥಿರವಾಗಿ ಇದ್ದಾಗ ದೇವರನ್ನು ಮರೆಯುವುದು, ಇವು ಸಡಿಲಗೊಂಡರೆ ದೇವರಲ್ಲಿ ಭಕ್ತಿ ತೋರುವುದು, ಸುಖ ಬಂದಾಗ ಮೈಮರೆತು, ಸುಖವಿಲ್ಲದಿದ್ದಾಗ ದೇವರು ಕೊಡಲಿಲ್ಲವೆಂದು ಹಂಬಲಿಸುವುದು ಮನುಷ್ಯನ ಸ್ವಭಾವ. ದೇವರು ಅe್ಞÁನ ನೀಡಿದರೆ, ಅe್ಞÁನದಿಂದಲೇ ಪಾಪ ಕೃತ್ಯಗಳನ್ನು ಮಾಡುತ್ತೇವೆ. e್ಞÁನ ಪಾಂಡಿತ್ಯಗಳನ್ನು ನೀಡಿದರೆ ಭಕ್ತರನ್ನು ನಿಂದಿಸಿ ಪಾಪ ಮಾಡುತ್ತೇವೆ. ಹೀಗೆ ಪಾಪ ಕೃತ್ಯಗಳಿಗೂ ಮನುಷ್ಯ ಜನ್ಮಕ್ಕೂ ಅವಿನಾಭಾವ ಸಂಬಂಧ. ಧನ ಹೀನವಾದ ಮನುಷ್ಯ ಜಗತ್ತಿನ ಧನವೆಲ್ಲಾ ತನಗೆ ಬರಲಿ ಎಂದು ಅಪೇಕ್ಷಿಸುತ್ತಾನೆ. ಧನವಂತನಾದಾಗ ಧನಮದದಿಂದ ಸಜ್ಜನರಿಗೆ ಒಂದು ಕಾಸನ್ನೂ ಕೊಡದೆ ಕೃಪಣನಾಗುತ್ತಾನೆ. ಹೀಗೆ ಮನುಷ್ಯ ತನ್ನ ``ನಿಜವಾಸನೆ'ಗಳನ್ನು ಮೀರಿ ಬೆಳೆಯಲಾರ.
ಹರಿದಾಸನಾದಮೇಲೂ ಸಾಧನ ಮಾರ್ಗವನ್ನು ಹಿಡಿಯದೆ 'ಮನುಜಪಶು' ವಂತೆ ನಡೆದುಕೊಂಡು ಆಯುಷ್ಯವನ್ನು ವ್ಯಯ ಮಾಡುತ್ತಿರುವ ಬಗ್ಗೆ ದಾಸರಿಗೆ ಬೇಸರವಿದೆ.
1. ಮಾತುಗಳು ನಾಲ್ಕಾಡಿ | ಸಭೆಯೊಳಗೆ
ಪ್ರೀತಿಪಡಿಸುವೆ ನರರ
ರೀತಿಯಲಿ ಶ್ರುತಿ ಸ್ಮøತಿಗಳ | ಪಠಿಸಿ ಶ್ರೀ
ನಾಥ ನಿನ್ನ ತೋಷಿಸಿದೆನೇ (ಕೀ- 82)
2. ಜಪಮಣಿಗಳನ್ನು ತಿರುಗಿಸಿ | ಲೋಕರನು
ಕಪಟಗೊಳಿಸುವೆನಲ್ಲದೆ
ತಪ ಮಾಡಿದೆನೆ ಮನದಲಿ | ನಿನ್ನಯ
ಕೃಪೆಯು ಉದಿಸುವ ತೆರದಲಿ (ಕೀ-82)
3. ಉಣಿಸುವೆನೋ ಪರರನ್ನ ದಣಿವೆನೋ ಅದಕ್ಕೆ
ಕುಣಿವೆನೋ ಅವರಂತೆ ಗುಣವೇನೋ ಅವರಿಗೆ (ಕೀ. - 85)
4. ಪಾಮರ ಜನರೊಳು ಸಿಕ್ಕದೆ ನಿನ್ನಯ
ನಾಮವ ಪೇಳುವ ಜನರನು ಕಾಣೆನು
ಸ್ವಾಮಿ ಏನು ಗತಿ ಎನ್ನ ಹೃದಯವೆಂಬ
ಧಾಮದಿ ಪೊಳೆಯೊ ವಾಸುದೇವವಿಠಲ (ಕೀ - 89)
ಹೀಗೆ ಎಲ್ಲ ಅಪರಾಧಗಳಿಗೂ ಶರಣಾಗತಿಯೊಂದೇ ಸೂಕ್ತ ಮಾರ್ಗವೆಂದು ಭಾವಿಸಿ, ಸ್ವಾಹಂಕಾರವನ್ನು ಬಿಟ್ಟು, ಶುದ್ಧ ಮನಸ್ಸಿನಿಂದ ದೇವರಿಗೆ ಮೊರೆಯಿಡುತ್ತಾರೆ. ಪಂಚೇಂದ್ರಿಯಗಳ ಗುಣಕರ್ಮಗಳನ್ನು ಭಗವದರ್ಪಣ ಮಾಡಿ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಾರೆ. ಸುತ್ತಮುತ್ತಲ ಸಮಾಜದಲ್ಲಿ ಮಾಗದರ್ಶನ ಮಾಡಬಲ್ಲ ಜನರ ಸಂಖ್ಯೆ ಬಹಳ ವಿರಳ. ಸಂಶಯಗಳನ್ನು ಪರಿಹರಿಸಿ ಮನಸ್ಸನ್ನು ಕಳಂಕರಹಿತವನ್ನಾಗಿ ಮಾಡುವ ಗುರುಗಳು, ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಬಂಧುಗಳು, ಪರತತ್ವವನ್ನು ಉಪದೇಶಿಸಬಲ್ಲ ಸಂತರು ಕಡಿಮೆಯಾಗಿದ್ದು, ಮುಖಸ್ತುತಿ ಮಾಡುವ ಜನರೇ ಹೆಚ್ಚು. ಆದ್ದರಿಂದ ನಮ್ಮನ್ನು ಸಲಹುವ ಗುರು, ದೈವ, ಯಜಮಾನ ಎಲ್ಲವೂ ಶ್ರೀಹರಿಯೆ ಎಂದು ಭಾವಿಸುತ್ತಾರೆ.
1. ಹಲವು ಪರಿಯಲೆನ್ನ ಸಲಹುವ ಗುರುದೈವ
ಕುಲಪ ವಾಸುದೇವವಿಠಲ ನೀ ಕರುಣಿಸು (ಕೀ-12)
2. ಮನುಜ ಪಶು ಎಂದು ಎನ್ನಲ್ಲಿ ದಯಮಾಡು
ಅನಿಮಿತ್ತ ಬಂಧು ವಾಸುದೇವವಿಠಲ (ಕೀ-83)
3. ಶ್ರೋತ್ರಕ್ಕೆ ನಿನ್ನ ಕಥೆ ವಾಸಕ್ಕೆ ನಿನ್ನ ಗಂಧ
ನೇತ್ರಕ್ಕೆ ನಿನ್ನ ರೂಪ ರಸನಿಗೆ ನಾಮಾಮೃತ
ಗಾತ್ರಕ್ಕೆ ನಿನ್ನ ಪಾದ ಸ್ಪರುಷ ಮನೋಬುದ್ಧಿ
ಮಾತ್ರಕ್ಕೆ ಗುಣಕರ್ಮಕೊಡು ವಾಸುದೇವವಿಠಲ (ಕೀ-77)
4. ನಿನ್ನ ಮರಹೆ ಮೃತ್ಯು ನೆನಹೆ ಜೀವ
ಧನ್ಯರಿಗೆ ಇದೆ ತತ್ವ ವಾಸುದೇವವಿಠಲ (ಕೀ-89)
ಇದು ವ್ಯಾಸತತ್ವಜ್ಞರ ಆಧ್ಯಾತ್ಮಿಕ ನಿಲುವು.
ವಿಜಯದಾಸರು, ಗೋಪಾಲದಾಸರು, ಮತ್ತು ಜಗನ್ನಾಥದಾಸರ ಕೃತಿಗಳಲ್ಲಿ ಅಪರೂಪಕ್ಕೂ ಸಿಗದ ಮಧುರ ಭಕ್ತಿಯ ಕೃತಿಗಳು ವಾಸುದೇವವಿಠಲರ ಕೃತಿಗಳಲ್ಲಿ ದೊರೆಯುವುದು ಒಂದು ವೈಶಿಷ್ಟ್ಯ. ಶ್ರೀಪಾದರಾಜರ ಭ್ರಮರಗೀತ, ವೇಣುಗೀತಗಳಂತೆ ಭಾಗವತದ ಗೋಪಿಕಾ ಸ್ತ್ರೀಯರ ಮಧುರ ಭಾವನೆಗಳನ್ನು ವಾಸುದೇವವಿಠಲರು ಕನ್ನಡದಲ್ಲಿ ನಿರೂಪಿಸಿದ್ದಾರೆ. ವೇಣುಗೋಪಾಲನ ಲೀಲಾ ವಿನೋದಗಳನ್ನು ವರ್ಣಿಸುವಾಗ ತಮ್ಮನ್ನೇ ಒಬ್ಬ ಗೋಪಿಕಾ ಸ್ತ್ರೀಯಂತೆ ಭಾವಿಸಿಕೊಂಡು ಕೃಷ್ಣನಿಗಾಗಿ ಹಂಬಲಿಸುವ ಗೋಪಿಕಾ ಸ್ತ್ರೀಯರ ವಿರಹವನ್ನು ಚಿತ್ರಿಸಿದ್ದಾರೆ. ಕೃಷ್ಣನನ್ನು ಕಾಣದೆ ಅಂತರಂಗದ ಬಾಧೆಯಲ್ಲಿ ಚಿಂತೆಪಡುವ ನಾರಿಯರಿಗೆ ಕೃಷ್ಣನ ಗುಣವಿಶೇಷಗಳನ್ನು ಎಷ್ಟು ಹೊಗಳಿದರೂ ತೃಪ್ತಿಯಿಲ್ಲ. ಅವರ ಪಾಲಿಗೆ ಅವನು ಧೀರ, ಗಂಭೀರ, ಗೋರಸಚೋರ, ಗೋಪಿಜಾರ, ವೀರಾಧಿವೀರ, ರಂಗ, ಗರುಡತುರಂಗ, ವಿಧ್ರುತರಥಾಂಗ, ಸಜ್ಜನಸಂಗ, ದೇವ, ಭಕುತರಕಾವ, ವರಗಳನೀವ, ರಿಪುವನದಾವ, ಶ್ರೀಶ, ಸುಂದರಹಾಸ, ಮುನಿಮನವಾಸ, ಶತರವಿಭಾಸ (ಕೀ.-36) ಇಂತಹ ಗೋಪಾಲನನ್ನು ಕಾಣದೆ ನಾರಿಯರು ಮನೋವಿಕಲರಾಗುತ್ತಾರೆ. ಚಂದ್ರೋದಯ, ಮಾವಿನ ಚಿಗುರು, ಮೋಡಗಳ ಆಡಂಬರ, ಅರಳಿದ ತಾವರೆಗಳು ಇವುಗಳಿಂದ ಅವರ ಮನಸ್ಸು ಉಲ್ಲಾಸಗೊಳ್ಳುವ ಬದಲು ವಿಹ್ವಲಗೊಳ್ಳುತ್ತದೆ. ಚಂದ್ರನನ್ನು ಕಂಡಾಗ ಇಂದ್ರನ ಅನುಜನಾದ ಶ್ರೀಹರಿಯನ್ನು ಕಂಡಂತೆ, ಪಲ್ಲವಿಸಿದ ಚೂತ ತರುಗಳನ್ನು ಕಂಡಾಗ ಕೃಷ್ಣನ ಪಾದ ಪಲ್ಲವಗಳನ್ನು ಕಂಡಂತೆ, ಮೇಘಗಳ ಆಡಂಬರವನ್ನು ಕಂಡಾಗ ಮೇಘಶ್ಯಾಮನಾದ ಕೃಷ್ಣನನ್ನು ಕಂಡಂತೆ, ಕುಂದಕುಸುಮಗಳನ್ನು ಕಂಡಾಗ ಕುಂದರದವನಾದ ಕೃಷ್ಣನನ್ನು ಕಂಡಂತೆ ಭಾಸವಾಗಿ ಅವರು ಮನದಲ್ಲಿ ಕಂದಿಕುಂದುತ್ತಾರೆ. (ಕೀ-10) ಕೃಷ್ಣನ ಗೆಳೆಯನಾದ ಉದ್ಧವ ಮದುರೆಯಿಂದ ಹಿಂತಿರುಗಿ ಬಂದಾಗ ಅವನನ್ನು ಕಂಡ ನಾರಿಯೊಬ್ಬಳಿಗೆ ಕೃಷ್ಣನನ್ನೇ ಕಂಡಂತೆ ಆಯಿತು.
ಎನ್ನಯ ನಾಯಕಿಯ ಸ್ವಾಮಿಯ ಕಂಡಂತೆ
ನಿನ್ನ ನೋಡಲಾಯಿತೋ ಪ್ರಾಣಪ್ರಿಯದೂತನೆ (ಕೀ- 15)
ಎನ್ನುತ್ತಾಳೆ. ಕೃಷ್ಣನ ಅಗಲಿಕೆಯ ವಿರಹದಿಂದ ಅವಳು ಎಲ್ಲಾ ಲೌಕಿಕ ಆಸಕ್ತಿಗಳನ್ನು ಕಳೆದುಕೊಂಡಿದ್ದಾಳೆ. ಸುಗಂಧದ್ರವ್ಯಗಳು ಸಂಕೋಲೆಗಳಂತೆ ಬಿಗಿಯುತ್ತವೆ. ಉಟ್ಟ ವಸ್ತ್ರಗಳು ಶಸ್ತ್ರಗಳಂತೆ ದೇಹವನ್ನು ಕತ್ತರಿಸುತ್ತವೆ. ಮನೆಯೆಂಬುದು ಅವಳ ಪಾಲಿಗೆ ಕಾಡಾಗಿದೆ. ಮಾವಿನ ಚಿಗುರಿನ ಸ್ಪರ್ಶ ತುಂಬೆ ಸೊಪ್ಪಿನ ಸ್ಪರ್ಶದಂತೆ ಅಸಹನೆಯಾಗಿದೆ. ಹೀಗೆ ತಾನು ಅನುಭವಿಸುತ್ತಿರುವ ವಿವಿಧ ತಾಪಗಳು ಶ್ರೀಕೃಷ್ಣನ ಪಾದನಖಗಳೆಂಬ ಚಂದ್ರಕಿರಣಗಳ ದರ್ಶನದಿಂದ ಮಾತ್ರ ಉಪಶಮನವಾಗಬಹುದು ಎಂದು ಉದ್ಧವನಿಗೆ ಹೇಳುತ್ತಾಳೆ (ಕೀ-15). ಮತ್ತೊಬ್ಬ ಭಕ್ತಳ ಅಭಿಪ್ರಾಯ ಹೀಗಿದೆ :
ಗುಣವೇಕೆ ರೂಪವೇಕೆ ದೋಷಗಳಿರಲೇಕೆ
ಮನಮೆಚ್ಚುಕೆಯೊಂದೆ ಆತಂಗೆ ಮುಖ್ಯ
ಅನುಮಾನಿಸಬೇಡ ಆತನ ಮೊರೆ ಹೋಗು
ಮನದಾಸೆ ನೀಡುವ ವಾಸುದೇವವಿಠಲ (ಕೀ. 6)
ಈ ಮಾತುಗಳು ಹೆಣ್ಣೊಬ್ಬಳು ಮತ್ತೊಬ್ಬ ಹೆಣ್ಣಿಗೆ ಹೇಳುವ ಹಿತೋಕ್ತಿಗಳಂತೆ ಕಂಡರೂ ಅಪರೋಕ್ಷ e್ಞÁನಕ್ಕಾಗಿ ಹಂಬಲಿಸುವ ಜೀವಾತ್ಮನಿಗೆ ಹೇಳಿದ ಉಪದೇಶಾತ್ಮಕ ಹಿತೋಕ್ತಿಗಳಾಗಿವೆ.
ಸಂಸಾರ ವಾರಿಧಿಯ ಸೆಳತಕ್ಕೆ ಸಿಕ್ಕಿ ಮುಳುಗಿ ಹೋಗಬೇಕಿದ್ದ ಜೀವಿಯನ್ನು ಉದ್ಧರಿಸಿ ದಡಕ್ಕೆ ಸೇರಿಸುವಂತೆ ತಮಗೆ ಯತಿಯಾಗುವ ಅವಕಾಶ ನೀಡಿದ ಶ್ರೀಹರಿಗೆ ವ್ಯಾಸತತ್ವಜ್ಞರು ಕೃತಜ್ಞತೆ ಅರ್ಪಿಸುತ್ತಾರೆ. ದೇಹ, ಜಗತ್ತು ಅಸ್ಥಿರ ಮತ್ತು ನಿಷ್ಫಲವೆಂಬ e್ಞÁನ ವೈರಾಗ್ಯಗಳನ್ನು ಕೊಟ್ಟು ಸನ್ಯಾಸಾಶ್ರಮ ಸ್ವೀಕರಿಸುವಂತೆ ಮಾಡಿದ್ದೇನೋ ನಿಜ, ``ಯತಿ'ಯಾದ ಮಾತ್ರಕ್ಕೆ ``ರತಿ' ಬಿಡಲು ಸಾಧ್ಯವೇ? ಆದ್ದರಿಂದಲೇ
ಯತಿ ಮಾಡಿ ಕೂಡಿಸಿದೆ ನಿನ್ನ ಪಾದಾಂಬುಜದಲಿ
ರತಿ ಕೊಟ್ಟು ಉದ್ಧರಿಸೊ ವಾಸುದೇವವಿಠಲ (ಕೀ-86)
ಎಂದು ಪ್ರಾರ್ಥಿಸುತ್ತಾರೆ. ಜೀವಿಯ ಸ್ವಾಹಂಕಾರವು ದೂರವಾಗುವುದು ದೇವರ ಸರ್ವೋತ್ತಮತ್ವವನ್ನು ಒಪ್ಪಿಕೊಂಡಾಗ ಮಾತ್ರ. ದೇವರಿಗೂ ಮಾನವರಿಗೂ ಯಾವುದೇ ರೀತಿಯಲ್ಲೂ ಸಮಾನತೆ ಸಾಧ್ಯವಿಲ್ಲ. ``ಅವನು ಗುಣಪೂರ್ಣ, ನಾನು ದೋಷಕರ, ಅವನು ಲಕ್ಷ್ಮೀರಮಣ ನಾನು ಕೃಪಣ', ಈ ಕಾರಣಗಳಿಂದ ನಾನೇ ಅವನಿಗೆ ಮರುಳಾದೆ ಅನ್ನುತ್ತಾರೆ. ಲೋಕದಲ್ಲಿ ನಾನಾ ಬಗೆಯ ಜೀವರು ಇರುವುದರಿಂದ ಅವರವರ ಯೋಗ್ಯತಾನುಸಾರ ಮಾಡುವ ಸಾಧನೆಗಳಿಗೆ ತಕ್ಕ ಫಲವನ್ನು ಕೊಡುವವನು ಶ್ರೀಹರಿಯೇ, ಆದ್ದರಿಂದ ಜೀವಿಗಳು ಅಸ್ವತಂತ್ರರು. ನಮ್ಮದೆಂದು ಹೇಳಿಕೊಳ್ಳುವ ಸಾಧನೆಗಳು ಯಾವುದೂ ನಮ್ಮದಲ್ಲ. ಸಾಧನೆಗೆ ಪ್ರೇರಕನೂ, ಸಾಧನೆಗೆ ಒಲಿದವನೂ ಆದ ಕಾರಣದಿಂದಲೇ ಶ್ರೀಹರಿಯನ್ನು ``ಸಾಧ್ಯ' ಎನ್ನುತ್ತಾರೆ.
ಬಲುವಿಧ ಸಾಧನ ಜಗದೊಳು ನೀ ಬಲ್ಲಿ
ಛಲವೇತಕೋ ಬಡವಗೆ ಇದರಲ್ಲಿ
ತಿಳಿದ ಸಾಧನವಿತ್ತು ವಾಸುದೇವವಿಠಲ
ಫಲವಾಗುವಂತೆ ಭಕುತಿಯ ನೀಡೋ (ಕೀ.-75)
ಹೀಗೆ ಸ್ವಾಹಂಕಾರ ಮತ್ತು ಮಮಕಾರಗಳನ್ನು ದೂರೀಕರಿಸಿ ವಾಸುದೇವವಿಠಲರು ಶ್ರೀಹರಿಯಲ್ಲಿ ನಿರ್ವ್ಯಾಜ ಭಕುತಿಯನ್ನು ಮಾತ್ರ ಬೇಡುತ್ತಾರೆ. ಹೀಗೆ ತನ್ನ ಮಿತಿಯನ್ನು ಅರಿತ ಜೀವಿಗೆ ಶ್ರೀ ಹರಿಯ ಅನಂತ ಗುಣಗಳನ್ನು ಕೊಂಡಾಡುವುದು, ಅವನ ಮಹಿಮಾತಿಶಯವನ್ನು ಸ್ತುತಿಸುವುದು, ತನ್ನನ್ನು ತಾನೇ ನಿಂದಿಸಿಕೊಂಡು ತಪ್ಪುಗಳನ್ನು ಒಪ್ಪಿಸುವುದು, ತನ್ನ ಹೃದಯದ ಕರೆ-ಮೊರೆ, ಕಾತುರ-ಆತುರ, ತುಮುಲ-ತಳಮಳ ಮೊದಲಾದವುಗಳನ್ನು ನಿವೇದಿಸಿ ಹರಿ ಕರುಣೆಗಾಗಿ ಹಂಬಲಿಸುವುದು ನಿತ್ಯಜೀವನದ ಭಾಗವಾಗಿ ಬಿಡುತ್ತದೆ. ಈ ಭಾವನೆಗಳ ಅಭಿವ್ಯಕ್ತಿಯನ್ನು ವಾಸುದೇವವಿಠಲರ ಕೃತಿಗಳಲ್ಲಿ ಕಾಣಬಹುದು.
ವಾಸುದೇವವಿಠಲರ ಕೃತಿಗಳನ್ನು ಪರಿಶೀಲಿಸಿದಾಗ ಭಕ್ತಿ, ನೀತಿ ಮತ್ತು ವೈರಾಗ್ಯಗಳು ಸಂಸಾರ ವಿಮುಖವಾದದ್ದಲ್ಲ, ಜೀವನವನ್ನು ಇವರು ಅತ್ಯಂತ ಗೌರವದಿಂದ ನೋಡಿದ್ದಾರೆ. ಅದನ್ನು ಹೇಯವೆಂದು, ವಿಷಯ ಕೂಪವೆಂದು, ಕರ್ಮಕಾಂಡವೆಂದು ತಿರಸ್ಕರಿಸಿಲ್ಲ. ಮಾನವ ಜೀವನದ ಶ್ರೇಷ್ಠತೆಯನ್ನು ಒಪ್ಪಿಕೊಂಡು e್ಞÁನ, ಭಕ್ತಿ, ವೈರಾಗ್ಯಗಳ ಮೂಲಕ ಜೀವನವನ್ನು ಶುದ್ಧಗೊಳಿಸುವ ಹಂಬಲ ಇವರದು. ಇದನ್ನು ತಮ್ಮ ಹಲವಾರು ಕೀರ್ತನೆಗಳಲ್ಲಿ ``ಸಾಧನೆ' ಎನ್ನುತ್ತಾರೆ. ಸಾಧನೆಯ ವಿವಿಧ ಮುಖಗಳನ್ನು ಪರಿಚಯಿಸಿದ್ದಾರೆ.
ವೇಳೆ ಬಂದಾಗ ಬಿಡದೆ ಸಾಧಿಸದವನ
ಬಾಳುವೆ ಬೋಳೆ ಅದು ಗೋಳಲ್ಲವೆ
ಗಾಳಿ ಬಂದ ಕೈಯಲೆ ತೂರಿಕೊಳ್ಳಿರಿ ನೀವೆ
ಮೇಲೆ ತನ್ನ ವಶವೇನೋ ದೇಶಕಾಲಂಗಳು (ಕೀ -88)
ಇದು ವಾಸುದೇವವಿಠಲರ ಜೀವನ ದೃಷ್ಟಿ

No comments:
Post a Comment