ಸರ್ವರಿಗೂ ಶ್ರೀಭೂತರಾಜರ ಅನುಗ್ರಹ ಪ್ರಾಪ್ತಿಯಾಗಲಿ ಎಂದು ಪ್ರಾರ್ಥನೆ.
ಶ್ರೀರತ್ನಗರ್ಭತೀರ್ಥ ಗುರುಭ್ಯೋ ನಮಃ
ಶ್ರೀಭೂತರಾಜಾಯ ನಮಃ
ಪ್ರಕೃತಿ ಮಾತೆಯ ನಡುವೆ ಕಂಗೊಳಿಸುತ್ತಿರುವ ನಾರಾಳ ಕ್ಷೇತ್ರ ಶ್ರೀ ಭೂತರಾಜರ ಅವತಾರ ಭೂಮಿ.ಸುಮಾರು 1400 ರ ದಶಕದಲ್ಲಿ ಮಹಾ ಮಹಿಮರೆಂದು ಪ್ರಸಿದ್ದಿ ಪಡೆದಿದ್ದ ಶ್ರೀಸೋದೆ ವಾದಿರಾಜ ಮಠದ12ನೇ ಯತಿಗಳಾದ ಶ್ರೀರತ್ನಗರ್ಭತೀರ್ಥರ ಕಾಲದ ಮಠ ಇಲ್ಲಿದೆ.ಈ ಮಠದಲ್ಲಿ ಶ್ರೀರತ್ನಗರ್ಭತೀರ್ಥರ ಬೃಂದಾವನ, ಶ್ರೀವರಾಹತೀರ್ಥ, ಶ್ರೀಭೂತರಾಜರ ಕೆಲವೊಂದು ಆಭರಣ, ಗಂಟಾಮಣಿ ಹಾಗೂ ಉಯ್ಯಾಲೆ ಇದೆ.ಸದಾ ಸ್ತಬ್ಧವಾಗಿರುವ ಈ ಉಯ್ಯಾಲೆಯು ಶ್ರೀಭೂತರಾಜರ ನಡೆ ಉಂಟಾದಾಗ ತೂಗಲು ಆರಂಭಿಸುತ್ತದೆ.
ಸನಾತನ ಯತಿ ಪರಂಪರೆಯ ಸಿದ್ದಿ,ಸಾಧನೆ ತಪಃಶಕ್ತಿ ಊಹೆಗೂ ಮೀರಿದ್ದು.ಇಂತಹ ಅದ್ಭುತ ಸಾಧಕರಲ್ಲಿ ಶ್ರೀಸೋದೆ ವಾದಿರಾಜ ಮಠ ಪರಂಪರೆಯ 12 ನೇ ಯತಿಗಳಾದ ಶ್ರೀರತ್ನಗರ್ಭತೀರ್ಥರ ಮಹಿಮೆಗಂತೂ ಸಾಟಿಯೇ ಇಲ್ಲ.
12 ನೇ ಶತಮಾನದ ಕೊನೆಯ ಕಾಲಘಟ್ಟದಲ್ಲಿ
ಶ್ರೀಸೋದೆಮಠದ ಯತಿಗಳಾಗಿ ನೇಮಿತರಾಗಿದ್ದ ಶ್ರೀರತ್ನಗರ್ಭತೀರ್ಥರು ಯೋಗದಲ್ಲಿ ಉತ್ಕೃಷ್ಟ ಸಾಧನೆ ಸಲ್ಲಿಸಿದ ಅಪರೋಕ್ಷ ಜ್ಞಾನಿಗಳು.
ಶ್ರೀರತ್ನಗರ್ಭತೀರ್ಥರು ಜಪ,ತಪ ಪೂಜೆ,ಯೋಗ ಸಾಧನೆಗಳನ್ನು ಸದಾ ಏಕಾಂತ ಪ್ರದೇಶಗಳಲ್ಲೇ ಸಲ್ಲಿಸುತ್ತಿದ್ದರು.ಜನ ವಸತಿ ಸ್ಥಳಗಳಿಂದ ಯಾವಾಗಲೂ ದೂರವಿರಲು ಬಯಸುತ್ತಿದ್ದರು.ಒಮ್ಮೆ ಸಂಚಾರದಲ್ಲಿದ್ದಾಗ ಶ್ರೀರತ್ನಗರ್ಭತೀರ್ಥರು ಮಂಗಳೂರು ಪಟ್ಟಣದಿಂದ 18 ಮೈಲು ದೂರದಲ್ಲಿರುವ
ನಾರಾಳ ಎಂಬ ಹಳ್ಳಿಯನ್ನು ಕಂಡರು.ವನಸಿರಿಯ ನಡುವೆ ಕಂಗೊಳಿಸುತ್ತಿದ್ದ ಈ ಪ್ರದೇಶದಲ್ಲಿ ಅದೃಶ್ಯ ರೂಪದಲ್ಲಿರುವ
ದೇವತಾ ಸನ್ನಿಧಾನ ಶ್ರೀಪಾದರ ದಿವ್ಯದೃಷ್ಟಿಗೆ ಗೋಚರವಾಗಿ ಅವರನ್ನು ಸೆಳೆಯಿತು.ತಮ್ಮ ಆರಾಧ್ಯದೇವರಾದ ಶ್ರೀಭೂವರಾಹದೇವರನ್ನು ಸ್ಮರಿಸಿ ಅದೇಸ್ಥಳದಲ್ಲಿ ತಂಗಿದ ಶ್ರೀಪಾದರು ನಿತ್ಯನೈಮಿತ್ತಿಕ ಜಪ,ತಪ,ಪೂಜೆಗಳನ್ನು ಅಲ್ಲೇ ಸಲ್ಲಿಸಲು ಆರಂಭಿಸಿದರು.
ಶ್ರೀರತ್ನಗರ್ಭತೀರ್ಥರು ಹಲವಾರು ವರ್ಷಗಳಿಂದ ಪ್ರತಿನಿತ್ಯ
ಸೂರ್ಯೋದಯಕ್ಕೂ ಪೂರ್ವದಲ್ಲೇ ತಮ್ಮ ಪ್ರಾತಃರ್ವಿಧಿಗಳನ್ನು ಪೂರೈಸಿ ಧ್ಯಾನನಿರತರಾಗುತ್ತಿದ್ದರು. ಸೂರ್ಯೋದಯವಾಗಿ
ಸೂರ್ಯದೇವನು ಮೇಲೇರುತ್ತಿದ್ದಂತೆ
ಶ್ರೀರತ್ನಗರ್ಭತೀರ್ಥರೂ ಕೂಡಾ ತಮ್ಮ ಯೋಗಬಲದಿಂದ ಭೂಮಿಯಿಂದ ಮೇಲೆದ್ದು ಗಾಳಿಯಲ್ಲಿ ಪದ್ಮಾಸನದಲ್ಲಿ
ತೇಲುತ್ತಾ ಮೆಲ್ಲನೆ ಮೇಲಕ್ಕೆರುತ್ತಿದ್ದರು.ಸುಮಾರು 30ಅಡಿ ಎತ್ತರಕ್ಕೆ ಏರಿ ಹಲವುಗಂಟೆಗಳ ಕಾಲ ಗಾಳಿಯಲ್ಲೇ ತೇಲುತ್ತಾ ಉಗ್ರತಪಸ್ಸಿನಲ್ಲಿ ನಿರತರಾಗುತ್ತಿದ್ದರು.
ಮಧ್ಯಾಹ್ನವಾಗುತ್ತಿದ್ದಂತೆ ಭೂಮಿಗೆ ಇಳಿದು ಪೂಜೆಸಲ್ಲಿಸಿ ಭಿಕ್ಷೆ ಸ್ವೀಕರಿಸುತ್ತಿದ್ದರು.
ಇದೇ ಸಂದರ್ಭದಲ್ಲಿ
ಮೂಡುಬಿದ್ರೆ ಸಮೀಪದ ಪುತ್ತಿಗೆಯ ಚೌಟ ಅರಸುಸಂಸ್ಥಾನಕ್ಕೆ
ಸುಳ್ಯದ ಅರಸು ಸಂಸ್ಥಾನವು ಏನಾದರೊಂದು ನೆಪಒಡ್ಡಿ ಕೆಣಕಿ ಅವಮಾನಿಸುತ್ತಿತ್ತು.
ನಿರಂತರ ಜರಗುತ್ತಿದ್ದ
ಈ ಉಪಟಳದಿಂದ ಪುತ್ತಿಗೆಯ ಅರಸುಸಂಸ್ಥಾನ ಸುಸ್ತಾಗಿ ಹೋಗಿತ್ತು.ದುರದೃಷ್ಟವಶಾತ್ ಸುಳ್ಯದ ಅರಸರ ಪಡೆ ಬಹು ಬಲಾಡ್ಯವಾಗಿತ್ತು. ಪುತ್ತಿಗೆಯ ಚೌಟರ ಅರಸರ ಪಡೆಗಿಂತ ಸುಳ್ಯಅರಸು ಸಂಸ್ಥಾನದಲ್ಲಿ ಹತ್ತುಪಟ್ಟು ಹೆಚ್ಚು ಆನೆ,ಕುದುರೆ ಹಾಗೂ ಸೈನಿಕರಿದ್ದರು.ಹೀಗಾಗಿ ಪುತ್ತಿಗೆಯ ಸೇನಾಪಡೆಗೆ ಸುಳ್ಯದ ಅರಸರನ್ನು ಸೋಲಿಸುವುದು ಕನಸಿನ ಮಾತಾಗಿತ್ತು.ಆದರೆ ದಿನಕಳೆದಂತೆ ಸುಳ್ಯಸಂಸ್ಥಾನದ
ಉಪಟಳ ಹೆಚ್ಚಾಯಿತು.ಮಾಡು ಇಲ್ಲವೇ ಮಡಿ ಎಂಬ ನಿರ್ಧಾರಕ್ಕೆ ಬಂದ ಪುತ್ತಿಗೆಯ ಅರಸನು ತನ್ನಲ್ಲಿರುವ
ಪುಟ್ಟ ಸೇನಾಪಡೆಯೊಂದಿಗೆ
ಸುಳ್ಯ ಸಂಸ್ಥಾನದ ವಿರುದ್ಧ ಯುದ್ಧಕ್ಕೆ ಸನ್ನದ್ಧನಾಗಿ
ಸುಳ್ಯದತ್ತ ಹೊರಟ.
ಯುದ್ದ ನಿಮಿತ್ತ ಸೇನಾಪಡೆ ಸಮೇತನಾಗಿ ಪುತ್ತಿಗೆಯ ಅರಸನು ನಾರಾಳ ಪ್ರದೇಶವನ್ನು
ಹಾದುಹೋಗುತ್ತಿದ್ದ.ಆ ಸಮಯದಲ್ಲಿ ಅರಣ್ಯದ ನಡುವೆ ಬೃಹತ್ ವೃಕ್ಷಗಳಿಗಿಂತಲೂ ಎತ್ತರದಲ್ಲಿ ಗಾಳಿಯಲ್ಲಿ ತೇಲುತ್ತಾ ತಪಸ್ಸನ್ನು ಆಚರಿಸುತ್ತಿದ್ದ ಶ್ರೀರತ್ನಗರ್ಭತೀರ್ಥರನ್ನು ಕಂಡು ದಂಗಾದ. ಶ್ರೀಪಾದರು ಭೂಮಿಗೆ ಇಳಿಯುವುದನ್ನು ಕಾಣಲು ಅರಸನು ಕಾತರನಾಗಿದ್ದ.ತನ್ನ ಸಮಸ್ಯೆಯನ್ನು
ಇಂತಹ ತಪಸ್ವಿಗಳಲ್ಲಿ
ತಿಳಿಸಿ ಅವರ ಆಶೀರ್ವಾದ ಸಲಹೆ ಸ್ವೀಕರಿಸಿ ಆನಂತರ ಯುದ್ದಭೂಮಿಗೆ ಸಾಗೋಣ ಎಂದು ನಿರ್ಧರಿಸಿದ.
ಶ್ರೀರತ್ನಗರ್ಭತೀರ್ಥರು ಧ್ಯಾನ ಪೂರೈಸಿ ಭೂಮಿಗೆ ಇಳಿಯುತ್ತಿದ್ದಂತೆ
ಪುತ್ತಿಗೆಯ ಅರಸನು ಶ್ರೀಪಾದರ ಬಳಿ ಬಂದು ಶರಣುಹೋದ.ತನ್ನ ಸಂಸ್ಥಾನಕ್ಕೆ
ಒದಗಿರುವ ನೋವನ್ನು ತೋಡಿಕೊಂಡು ರಕ್ಷಿಸುವಂತೆ ಕೇಳಿಕೊಂಡ.
ಯತಿಗಳುದಿವ್ಯದೃಷ್ಟಿಯಿಂದ ವಿಷಯವನ್ನರಿತು
ಅಭಯ ನೀಡಿದರು.
ಮಂತ್ರಾಕ್ಷತೆ ಕೊಟ್ಟು ಹರಸಿ ತಾವು ನಿತ್ಯ ಪೂಜೆ ಸಲ್ಲಿಸುತ್ತಿದ್ದ ಭೂಭಾಗದ ಪಕ್ಕದಿಂದ ಮೂರು ಕಲ್ಲನ್ನು ತಮ್ಮ ಅಮೃತಹಸ್ತದಿಂದ ಪಡೆದುಕೊಂಡರು.ವಿಶೇಷ ಮಂತ್ರಗಳನ್ನು ಪಠಿಸಿ ತಮ್ಮ ಆರಾಧ್ಯಮೂರ್ತಿ ಶ್ರೀಭೂವರಾಹ ದೇವರನ್ನು ಸ್ಮರಿಸಿದರು.ತದನಂತರ ಶ್ರೀಪಾದರು ಆ ಮೂರೂ ಕಲ್ಲುಗಳನ್ನು ಚೌಟಅರಸನಿಗೆ ಅನುಗ್ರಹಿಸಿದರು.ಜೊತೆಗೆ
ಗೌಪ್ಯವಾಗಿ ಕೆಲವು ಮಾಹಿತಿಗಳನ್ನು ಅರಸನಿಗೆ ಹೇಳಿದರು.ಶ್ರೀಪಾದರ ಉಪದೇಶದಿಂದ ಪುತ್ತಿಗೆ ಅರಸನಿಗೆ ವಿಶೇಷ ಆತ್ಮವಿಶ್ವಾಸ
ಪ್ರಾಪ್ತಿಯಾಗಿತ್ತು.ಶ್ರೀಪಾದರ ಪವಿತ್ರಪಾದಗಳಿಗೆ ವಂದಿಸಿ ದುಪ್ಪಟ್ಟು ಹುಮ್ಮಸ್ಸಿನಿಂದ ಯುದ್ದಭೂಮಿಗೆ
ಧಾವಿಸಿದ.
ಪುತ್ತಿಗೆಚೌಟರ ಸೇನಾಪಡೆಗಿಂತ
ಹತ್ತುಪಟ್ಟು ಹೆಚ್ಚಿನ ಸೇನಾಪಡೆ ಹೊಂದಿದ್ದ ಸುಳ್ಯದ ಸೇನಾಪಡೆ ಭಾರೀ ಘೋಷಣೆ,ಸದ್ದಿನೊಂದಿಗೆ ಯುದ್ದಭೂಮಿಗೆ ಬಂದಿಳಿಯಿತು.
ಸುಳ್ಯದ ಸೇನಾಪಡೆಯ ಅಬ್ಬರ ಕಂಡು ಪುತ್ತಿಗೆ ಸೇನಾಪಡೆಯ ಜಂಘಾಬಲವೇ ಉಡುಗಿ ಹೋಯಿತು.ಸುಳ್ಯದ ಸೇನಾಪಡೆಯು ಇಡೀ ರಣಭೂಮಿಯ ಉದ್ದಗಲಕ್ಕೆಲ್ಲಾ
ಹರಡಿಕೊಂಡಿತ್ತು.
ಯುದ್ಧ ಆರಂಭಕ್ಕೆ ಕ್ಷಣಗಣನೆಯಾಗುತ್ತಿತ್ತು.
ರಣಕಹಳೆ ಮೊಳಗುತ್ತಿದ್ದಂತೆ
ಪುತ್ತಿಗೆ ಅರಸನು ಶ್ರೀರತ್ನಗರ್ಭತೀರ್ಥರನ್ನು ಭಕ್ತಿಯಿಂದ ಸ್ಮರಿಸಿಕೊಂಡ.ನಾರಾಳದಲ್ಲಿ ಶ್ರೀರತ್ನಗರ್ಭತೀರ್ಥರು ಮಂತ್ರಿಸಿ ನೀಡಿದ್ದ ಮೂರು ಕಲ್ಲುಗಳಲ್ಲಿ ಎರಡು ಕಲ್ಲುಗಳನ್ನು ತನ್ನ ಜೋಳಿಗೆಯಿಂದ ಹೊರತೆಗೆದನು.ಯತಿಗಳು ಗೌಪ್ಯವಾಗಿ ತಿಳಿಸಿದಂತೆ ಒಂದು ಕಲ್ಲನ್ನು ಹಿಂದೆ ಎಸೆದನು.ಇನ್ನೊಂದನ್ನು
ಮುಂದೆ ಎಸೆದನು.ಯತಿಗಳು ನೀಡಿದ ಕಲ್ಲು ಯುದ್ದಭೂಮಿಯ ಮೇಲೆ ಬೀಳುತ್ತಿದ್ದಂತೆ
ಅಲ್ಲೊಂದು ದೊಡ್ಡ ಪವಾಡವೇ ಜರಗಿತು.ನೋಡು ನೋಡುತ್ತಿದ್ದಂತೆಯೇ ರಣಭೂಮಿ ಅಲ್ಲೋಲ ಕಲ್ಲೋಲವಾಯಿತು.ಏಕಕಾಲದಲ್ಲಿ ಸಿಡಿಲುಗುಡುಗುಗಳು
ಯುದ್ದಭೂಮಿಗೆ ಅಪ್ಪಳಿಸಿದಂತಹ
ಸದ್ದು.ಪುತ್ತಿಗೆಅರಸರ
ಪುಟ್ಟಸೇನಾಪಡೆಯನ್ನು ಹೆಡೆಮುರಿ ಕಟ್ಟಲು ಬಂದಿದ್ದ ಸುಳ್ಯದ ಅರಸರ ವಿರಾಟ್ ಸ್ವರೂಪದ ಸೇನಾಪಡೆಯು ಯುದ್ದಭೂಮಿಯ ದೃಶ್ಯ ಕಂಡು ಕಂಗಲಾಯಿತು.ಸಾವಿರಾರು ದೈತ್ಯಗಾತ್ರದ ಶ್ವೇತವರ್ಣದ ವರಾಹಗಳು ಎಲ್ಲೆಂದರಲ್ಲಿ ಪ್ರತ್ಯಕ್ಷವಾದವು.ಸಂಪೂರ್ಣವಾಗಿ ಯುದ್ದಭೂಮಿಯನ್ನು ಅವು ಸುತ್ತುವರಿದವು.ಕಣ್ಣರೆಪ್ಪೆ ಮಿಟುಕಿಸುವಷ್ಟರಲ್ಲಿ
ಮಿಂಚಿನವೇಗದಲ್ಲಿ ಘೀಳಿಡುತ್ತಾ ಬಂದ ಈ ವರಾಹಗಳು ಸುಳ್ಯದ ಅರಸರ ಸೇನಾಪಡೆಯ ಮೇಲೆ ಉಗ್ರವಾಗಿ
ಎರಗಿದವು.ಘೋರ ಕಾಳಗಕ್ಕೆ ಸನ್ನದ್ಧವಾಗಿ ಬಂದಿದ್ದ ಸುಳ್ಯದ ಅರಸರ ಬೃಹತ್ ಸೇನಾಪಡೆಯು ವರಾಹಪಡೆಯ ಈ ಅನಿರೀಕ್ಷಿತ ದಾಳಿಗೆ ಕಂಗಾಲಾಗಿ ದಿಕ್ಕಾಪಾಲಾಗಿ ಹೋಯಿತು.ಧೀರ ಸೈನಿಕರಿಗೆ ಹೆಸರಾಗಿದ್ದ ಸುಳ್ಯದ ಸೈನಿಕರು ವರಾಹಗಳ ಆರ್ಭಟಕ್ಕೆ ಬೆದರಿ ಸಿಕ್ಕಸಿಕ್ಕಲ್ಲಿ ಓಡಿದರು.ಆನೆ ಕುದುರೆಗಳು ತಮ್ಮ ಮೇಲಿದ್ದ ಸವಾರರನ್ನು ನೆಲಕ್ಕೆ ಎಸೆದು ಪರಾರಿಯಾದವು.ರಣಭೂಮಿಯಲ್ಲಿ
ಏಕಕಾಲದಲ್ಲಿ ಸಾವಿರಾರು ವರಾಹಗಳ ದರ್ಶನ.ಬಹುಶಃ ಭಾರತದೇಶದ ಇತಿಹಾಸದಲ್ಲಿ ಈ ಹಿಂದೆಂದೂ ಸಂಭವಿಸಿದ ಅಪರೂಪದ ಅಪೂರ್ವ ಯುದ್ದ ಸುಳ್ಯದ ಯುದ್ದಭೂಮಿಯಲ್ಲಿ ಜರಗಿತ್ತು.
ಅನಿರೀಕ್ಷಿವಾದ ಈ ಧಾಳಿಯಿಂದ ಬೆಚ್ಚಿಬಿದ್ದ ಸುಳ್ಯದ ಅರಸನು ನೆಲಕಚ್ಚಿದ.ಪುತ್ತಿಗೆಯ ಚೌಟ ಅರಸರಿಗೆ ಶರಣಾಗಿ ತನ್ನ ತಪ್ಪಿಗೆ ಕ್ಷಮೆಯಾಚಿಸಿದ.
ಪುತ್ತಿಗೆಅರಸರ ವಿಜಯದುಂದುಭಿ
ಮೊಳಗುತ್ತಿದ್ದಂತೆ ಯುದ್ದಭೂಮಿಯಲ್ಲಿದ್ದ ವರಾಹಗಳು ಒಂದೊಂದಾಗಿ ಅದೃಶ್ಯವಾದವು.ಯುದ್ದ ಆರಂಭವಾಗಿ ಕೆಲ ತಾಸುಗಳಲ್ಲಿ ಪುತ್ತಿಗೆಯ ಅರಸನು ವಿಜಯಗಳಿಸಿದ. ಒಂದೆರಡು ದಿನಗಳಲ್ಲೇ ಮತ್ತೆ ಪುತ್ತಿಗೆಗೆ ಮರಳಿದ.
ತನ್ನ ವಿಜಯಕ್ಕೆ ಕಾರಣರಾದ ಶ್ರೀರತ್ನಗರ್ಭತೀರ್ಥರ ಬಳಿ ಓಡೋಡುತ್ತಾ ಬಂದು ಅವರ ಪಾದಕಮಲಗಳಿಗೆ ಆನಂದಭಾಷ್ಪ ಸುರಿಸುತ್ತಾ ನಮಿಸಿದ.
ಸುಳ್ಯದ ಅರಸರ ಶೋಷಣೆ ಹಾಗೂ ಉಪಟಳದಿಂದ ಪುತ್ತಿಗೆ ಸಂಸ್ಥಾನವನ್ನು ರಕ್ಷಿಸಿದ್ದಕ್ಕಾಗಿ
ಶ್ರೀರತ್ನಗರ್ಭತೀರ್ಥರ ಸಂಸ್ಥಾನಕ್ಕೆ
ಹತ್ತಾರು ಮೈಲು ವಿಸ್ತೀರ್ಣದ ಭೂಮಿ ಹಾಗೂ ಅಪಾರ ಕಾಣಿಕೆಗಳನ್ನು
ಅರ್ಪಿಸಿದ.
ಕೆಲವರ್ಷಗಳಲ್ಲೇ ಪುತ್ತಿಗೆ ಅರಸರ ಸಾಮ್ರಾಜ್ಯಕ್ಕೆ ಜಲಕ್ಷಾಮ ಬಂದಿತು.
ಪುತ್ತಿಗೆಅರಸನು ಮತ್ತೆ ಶ್ರೀರತ್ನಗರ್ಭತೀರ್ಥರಿಗೆ ಮೊರೆಹೋದ.ಶ್ರೀಗಳು ತಮ್ಮ ದಿವ್ಯಶಕ್ತಿಯಿಂದ
ವರಾಹದೇವರ ಮುಖಾಂತರ ತೀರ್ಥಕುಂಡ ಹಾಗೂ ಬಲುದೊಡ್ಡ ನೀರಿನ ಚಿಲುಮೆ ಸೃಷ್ಟಿಸಿ ಜಲಕ್ಷಾಮ ನಿವಾರಿಸಿದರು.
ವರಾಹದೇವರು ಎದ್ದು ಬಂದ ಕುಂಡಕ್ಕೆ ವರಾಹತೀರ್ಥ ಎಂಬ ಹೆಸರು ಬಂದಿತು.
ವರಾಹವು ನಡೆದಾಡಿದ ಸ್ಥಳದಲ್ಲಿ ಸೃಷ್ಟಿಯಾದ ಬಹುದೊಡ್ಡ ನೀರಿನ ಚಿಲುಮೆಯು ಕನ್ಯಾತೀರ್ಥವೆಂದು
ಪ್ರಸಿದ್ಧವಾಯಿತು.ಮುಂದೆ 15ನೇ ಶತಮಾನದಲ್ಲಿ ಶ್ರೀಭೂತರಾಜರೂ
ಕೂಡಾ ನಾರಾಳದ ಈ ಪುಣ್ಯಭೂಮಿಯಲ್ಲೇ ಅವತರಿಸಿದರು.
ಶ್ರೀರತ್ನಗರ್ಭತೀರ್ಥರ ಘಟನೆಯು ಕೇವಲ ಮಠ ಪರಂಪರೆಯ ಪುಟಗಳಲ್ಲಿ ದಾಖಲಾಗಿದ್ದು ಮಾತ್ರವಲ್ಲ,ತೌಳವ ಇತಿಹಾಸದಲ್ಲೂ ಇದೆ.ಈ ಕುರಿತ ಮೌಖಿಕ ಪರಂಪರೆಯ ಕಥೆಗಳಂತೂ ಇನ್ನಷ್ಟು ರೋಚಕವಾಗಿದೆ. ಅಸಾಧ್ಯ,ಅದ್ಭುತ ಎನ್ನುವಂತಹಸಿದ್ದಿಸಾಧನೆಗಳಿಂದ ಪ್ರಸಿದ್ಧರಾಗಿರುವ ಮಹಾತಪಸ್ವಿ
Superb madam..tumba channagi tilisidira
ReplyDeleteThank you
ReplyDelete