Tuesday, April 30, 2024

ಲಕ್ಷ್ಮೀವಲ್ಲಭ ತೀರ್ಥರು (1642) & ವಿದ್ಯಾವಲ್ಲಭತೀರ್ಥರು (1812) AT T.NARASIPURA

 ಲಕ್ಷ್ಮೀವಲ್ಲಭ ತೀರ್ಥರು  (1642)

Sri Lakshmivallabha Theertha took Ashrama from Sri Kambaluru Ramachandra Theertha and is Eighteenth saint from Madhwacharya.

Belur and its surroundings were his main places of tatva prachara. He has written many stotras and ‘Prabhata Panchaka Stotra’ is one among them.

After handing over mahasamsthana to Sri Lakshminatha Theertha, he entered Vrundavana at Tirumakoodalu, sangama Kshethra.

ವಿದ್ಯಾವಲ್ಲಭತೀರ್ಥರು (1812) 


ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಹಳೇ ತಿರುಮಕೂಡಲಿನಲ್ಲಿ ವಿರಾಜಮಾನರಾಗಿರುವ ಮಠದ ಪರಂಪರೆಯ 27ನೇ ಪೀಠಾದಿಪತಿಗಳಾದ ಶ್ರೀ ವಿದ್ಯಾವಲ್ಲಭತೀರ್ಥರು

ಶ್ರೀನಾಥ ತೀರ್ಥರು (1780)
ಭಾಷ್ಯದೀಪಿಕಾಚಾರ್ಯರೆಂದು ಪ್ರಸಿದ್ಧರಾದ ಶ್ರೀಜಗನ್ನಾಥತೀರ್ಥರ ಶಿಷ್ಯರಾದ, ಪ್ರತ್ಯರ್ಥಿಮತಭಂಜನರೆಂದು ಲೋಕವಿಖ್ಯಾತರಾದ ಶ್ರೀಶ್ರೀನಾಥತೀರ್ಥ ಶ್ರೀಪಾದಂಗಳವರು ಕಾಶಿರಾಜನ ಅಧ್ಯಕ್ಷತೆಯಲ್ಲಿ ನಡೆದ ವಿದ್ವತ್ಸಭೆಯಲ್ಲಿ ನೂರಾರು ಪಂಡಿತರ ಪ್ರಶ್ನೆಗಳಿಗೆ ಉತ್ತರವಿತ್ತು ತಮ್ಮ ಶತಾವಧಾನದ ವೈಖರಿಯಿಂದ ಎಲ್ಲ ಪಂಡಿತರ ಮನಸೂರೆಗೊಂಡರು,, ಇವರ ವಿದ್ಯಾ ವೈಭವವನ್ನು ಕಂಡ ಕಾಶಿನರೇಶನು ಶ್ರೀವ್ಯಾಸರಾಜಮಠವು ನಿಜಾರ್ಥದಲ್ಲಿ ವಿದ್ಯಾಸಿಂಹಾಸನವೆಂದು ತಲೆಬಾಗಿ ಗೌರವಿಸಿದನು. ಅಂದಿನಿಂದ ಶ್ರೀಮಠದ ಪೀಠಾಧಿಪತಿಗಳ

ಹೆಸರಿನೊಂದಿಗೆ "ವಿದ್ಯಾ" ಎನ್ನುವುದು ಆರಂಭವಾಯಿತು. ಶ್ರೀಮದಾಚಾರ್ಯರ ಈ ಶ್ರೇಷ್ಠ ವಿದ್ಯಾಸಿಂಹಾಸನಕ್ಕೆ ಅಸಾಧಾರಣವಾದ ಕೀರ್ತಿಯನ್ನು ತಂದಿತ್ತ ಶ್ರೀಶ್ರೀನಾಥತೀರ್ಥಶ್ರೀಪಾದಂಗಳವರು





Friday, April 19, 2024

ಈ ಕಲ್ಲೀಲ ಭಗವತಿ ದೇವಾಲಯ ಒಂದು ಗುಹಾ ದೇವಾಲಯ #KERALA 11

 ಈ ಭಗವತಿ ದೇವಿಯು ಕರುಣಾಮಯಿ ದೇವಿ ಎಂದೆ ಪ್ರಸಿದ್ಧಳಾಗಿದ್ದಾಳೆ. ಕಲ್ಲೊಳಗಿರುವ ಈಕೆ ಕರುಣಾಮಯಿ ಆಗಿರುವುದಕ್ಕೂ ಕಾರಣ ಇಲ್ಲದಿಲ್ಲ. ಇಲ್ಲಿಗೆ ಭೇಟಿ ನೀಡುವ ಅಪಾರ ಸಂಖ್ಯೆಯ ಭಕ್ತರ ನಂಬಿಕೆಯಂತೆ ಈ ಭಗವತಿ ದೇವಿ ಬೇಡಿದ ಎಲ್ಲ ವರಗಳನ್ನು ಭಕ್ತರಿಗೆ ಅನುಗ್ರಹಿಸುತ್ತಾಳಂತೆ.

ಈ ಭಗವತಿ ದೇವಿಯ ದರ್ಶನ ಪಡೆದು ಯಾರೆ ಆಗಲಿ ಬರಿಗೈಯಿಂದ ಮರಳಲು ಸಾಧ್ಯವೆ ಇಲ್ಲವೆಂದು ಹೇಳಲಾಗುತ್ತದೆ. ಹಾಗಾಗಿ ಈ ಶಕ್ತಿ ದೇವಿಯನ್ನು ಕರುಣಾಮಯಿ ಎಂದೆ ಜನರು ಕೊಂಡಾಡುತ್ತಾರೆ. ಇನ್ನೂ ಹೆಸರಿಗೆ ಸಂಬಂಧಿಸಿದಂತೆ ಈ ದೇವಿಯು ಅತಿ ಪ್ರಾಚೀನವಾದ ಬೃಹದಾಕಾರದ ಕಲ್ಲಿನಲ್ಲಿ ವಾಸವಾಗಿದ್ದಾಳೆ.

ಈ ಕ್ಷೇತ್ರಕ್ಕೆ ಸಂಬಂಧಿಸಿದ ದಂತಕಥೆಯಂತೆ, ಒಂದೊಮ್ಮೆ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಜನಾಂಗದವರು ಕಾಡಿನಲ್ಲಿ ಅಲೆಯುತ್ತ ಒಣ ಕಟ್ಟಿಗೆ, ಹಣ್ಣು ಹಂಪಲಗಳನ್ನು ಹುಡುಕುತ್ತ ಜೀವನ ಸಾಗಿಸುತ್ತಿದ್ದರು. ಆದರೆ ಒಮ್ಮೆ ಬರಗಾಲದ ಸ್ಥಿತಿ ಎದುರಾಗಿ ಅವರಿಗೆ ತಿನ್ನಲು ಎನ್ನು ದಕ್ಕದಾಯಿತು.

ಹೀಗೊಂದು ದಿನ ಆ ಬುಡಕಟ್ಟು ಜನರು ಎಂದಿನಂತೆ ಕಾಡಿನಲ್ಲಿ ಕಟ್ಟಿಗೆಗಳನ್ನು ಹುಡುಕುತ್ತ ಅಲೆಯುತ್ತಿದ್ದಾಗ ದೈವ ಕಾಂತಿ ಹೊಂದಿದ್ದ ಒಬ್ಬ ಸ್ತ್ರೀಯು ಬೃಹದಾಕಾರದ ಬಂಡೆಗಲೊಂದಿಗೆ ನಿರಾಯಾಸವಾಗಿ ಆಡುತ್ತಿರುವುದನ್ನು ಗಮನಿಸಿದರು.

ಹಾಗೆ ಆ ಬುಡಕಟ್ಟು ಜನರು ಮುಂದೆ ಬರುತ್ತಿದ್ದಂತೆಯೆ ಆ ಸ್ತ್ರೀಯು ಒಂದು ಹೆಬ್ಬಂಡೆಯನ್ನು ಛಾವಣಿಯನ್ನಾಗಿ ಮಾಡಿಕೊಂಡು ಇನ್ನೊಂದು ಬಂಡೆಯನ್ನು ತನ್ನ ಹಾಸಿಗೆಯನ್ನಾಗಿ ಮಾಡಿಕೊಂಡು ಅದರಲ್ಲಿ ಪ್ರವೇಶಿಸಿ ಬಿಟ್ಟಳು. ನಂತರ ಅವರಿಗೆ ತಾನು ಯಾರು ಎಂಬುದನ್ನು ಒಳಗಿನಿಂದಲೆ ಹೇಳಿ ಆಶೀರ್ವಾದಿಸಿದಳು.ಆ ಭಗವತಿ ದೇವಿಯು ತಾನು ಎಂದಿಗೂ ಇಲ್ಲಿಯೆ ವಾಸವಿರುವುದಾಗಿಯೂ, ತನ್ನನ್ನು ಅರಸಿಕೊಂಡು ಬರುವವರ ಸಕಲ ಕಷ್ಟ-ಕಾರ್ಪಣ್ಯಗಳನ್ನು ನಿವಾರಿಸುವುದಾಗಿಯೂ ಅಭಯ ನೀಡಿದಳು

ಇನ್ನೂ ಐತಿಹಾಸಿಕವಾಗಿ ಇಲ್ಲಿ ದೊರೆತಿರುವ ಕೆತ್ತನೆಗಳು ಹಾಗೂ ಇತಿಹಾಸಕಾರರ ಪ್ರಕಾರ ಹೇಳಬೇಕೆಂದರೆ ಇದು ಮೂರನೇಯ ಶತಮಾನಕ್ಕೆ ಸಂಬಂಧಿಸಿದ ಗುಹಾ ಬಂಡೆಯಾಗಿದೆ. ಜೈನ ಸನ್ಯಾಸಿಗಳು ಈ ಬಂಡೆಯ ರಚನೆಗಳನ್ನು ಆರಾಧಿಸುತ್ತಿದ್ದರೆಂದು ತಿಳಿದುಬರುತ್ತದೆ

ಇದಕ್ಕೆ ಪೂರಕವೆಂಬಂತೆ ಇಲ್ಲಿನ ಬಂಡೆಗಳ ಮೇಲೆ ಕೆತ್ತಲಾಗಿರುವ ಜೈನ ಪವಿತ್ರ 24 ತೀರ್ಥಂಕರರ ರಚನೆಗಳನ್ನು ಕಾಣಬಹುದು. ಅಲ್ಲದೆ ಜೈನರು ಇಲ್ಲಿ ಮುಖ್ಯ ದೇವಿಯಾಗಿ ಪದ್ಮಾವತಿಯನ್ನು ಆರಾಧಿಸುತ್ತಿದ್ದರೆಂದು ತಿಳಿದುಬರುತ್ತದೆ.

ಎರ್ನಾಕುಲಂ ಈ ದೇವಾಲಯವು ಎರ್ನಾಕುಲಂ ಜಿಲ್ಲೆಯ ಪೆರುಂಬವೂರು ಎಂಬಲ್ಲಿದ್ದು ಕಾಲಡಿ ಕ್ಷೇತ್ರದಿಂದ 22 ಕಿ.ಮೀ ಹಾಗೂ ಎರ್ನಾಕುಲಂ ನಗರದಿಂದ 53 ಕಿ.ಮೀ ಗಳಷ್ಟು ದೂರವಿದೆ. ತೆರಳಲು ಬಸ್ಸುಗಳು ಹಾಗೂ ಬಾಡಿಗೆ ಕಾರುಗಳು ದೊರೆಯುತ್ತವೆ. ಈ ದೇವಾಲಯವು 22 ಎಕರೆಗಳಷ್ಟು ವಿಸ್ತಾರವಾದ ದಟ್ಟಾರಣ್ಯದ ಮಧ್ಯದಲ್ಲಿ ಸ್ಥಿತವಿರುವುದು ವಿಶೇಷ. ಹಾಗಾಗಿ ಸುತ್ತಲೂ ಅದ್ಭುತ ಪ್ರಾಕೃತಿಕ ಸೌಂದರ್ಯವನ್ನು ಅನುಭವಿಸಬಹುದು.





Friday, July 14, 2023

ಕಣ್ವತೀರ್ಥ

 ಕಣ್ವ ತೀರ್ಥವು ಉಡುಪಿಯಿಂದ ನಲವತ್ತು ಕಿಲೋಮೀಟರ್ ದೂರದಲ್ಲಿರುವ ಒಂದು ಸಣ್ಣ ಹಳ್ಳಿ. ಈ ಸ್ಥಳದಲ್ಲಿ ಮಧ್ವಾಚಾರ್ಯರು ಕಣ್ಮರೆಯಾಗುವ ಮೊದಲು ತಮ್ಮ ಕೊನೆಯ ಕೆಲವು ತಿಂಗಳುಗಳನ್ನು ಕಳೆದರು ಎಂದು ನಂಬಲಾಗಿದೆ.ಅನಂತೇಶ್ವರ ದೇವಾಲಯಉಡುಪಿಯಲ್ಲಿ.

ಇದು ಋಷಿ ಕಣ್ವ (ಮಹರ್ಷಿ ಕಣ್ವ) ಧ್ಯಾನ ಮಾಡಿದ ನಿಖರವಾದ ಸ್ಥಳವಾಗಿದೆ. ಅವರು ರಾಮನನ್ನು ಪೂಜಿಸಿದರು.
ರಾಮ ಈ ಜಾಗಕ್ಕೆ ಬಂದು ಕೆಲಕಾಲ ನೆಲೆಸಿದ್ದ. ರಾವಣನ ಸಹೋದರ ವಿಭೀಷಣನು ಇದನ್ನು ಕೇಳಿ ರಾಮನನ್ನು ಭೇಟಿ ಮಾಡಲು ಇಲ್ಲಿಗೆ ಬಂದನು. ಅವರು ಮೂರು ವರ್ಷಗಳ ಕಾಲ ಇದ್ದರು.
ಪೇಜಾವರ ಮಠದ ಆರನೇ ಮಠಾಧೀಶ ವಿಜಯಧ್ವಜ ತೀರ್ಥರು  ಪ್ರಾಣದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ವಿಗ್ರಹದ ಎರಡೂ ಬದಿಯಲ್ಲಿ ಎರಡು ತೀರ್ಥಗಳಿವೆ - ರಾಮತೀರ್ಥ ಮತ್ತು ಕಣ್ವ ತೀರ್ಥ. ಪ್ರಾಣದೇವರು ದೇವಾಲಯವು ಸಮುದ್ರದ ಸಮೀಪವೇ ಇದ್ದರೂ ತೀರ್ಥಗಳು ಮಧುರವಾಗಿದ್ದರೆ ನೀರು.
ಹತ್ತಿರದಲ್ಲಿ ದೊಡ್ಡ ಅಶ್ವಥ್ ವೃಷ್ಕವಿದೆ.  ಮಧ್ವಾಚಾರ್ಯರು ಇಲ್ಲಿ ಚಾತುರ್ಮಾಸ ವ್ರತವನ್ನು ಆಚರಿಸಿದರು ಮತ್ತು ಅವರನ್ನು ನೋಡಿಕೊಳ್ಳಲು ದೀಕ್ಷೆ ಪಡೆಯುತ್ತಿದ್ದ ತಮ್ಮ ಎಂಟು ಶಿಷ್ಯರಿಗೆ ಅನುಗೃಹಗಳನ್ನು ನೀಡಿದರು.ಕೃಷ್ಣ ದೇವಾಲಯಉಡುಪಿಯಲ್ಲಿ.
ಎಂಟು ಶಿಷ್ಯರು ಮತ್ತು ಅವರು ನೇತೃತ್ವದ ಮಠಗಳೆಂದರೆ ಹೃಷಿಕೇಶ ತೀರ್ಥ (ಪಲಿಮಾರು ಮಠ),  ನರಸಿಂಹ ತೀರ್ಥ  (ಅಡಮಾರು ಮಠ),  ಜನಾರ್ದನ ತೀರ್ಥ (ಕೃಷ್ಣಾಪುರ ಮಠ), ಉಪೇಂದ್ರ ತೀರ್ಥ (ಪುತ್ತಿಗೆ ಮಠ), ವಾಮನ ತೀರ್ಥ (ಕಾಣಿಯೂರು ಮಠ),  ವಿಷ್ಣು ತೀರ್ಥ (ಸೋದೆ ಮಠ) ,   ರಾಮತೀರ್ಥ (ಶಿರೂರು ಮಠ) ಮತ್ತು ಅಕ್ಷೋಬ್ಯ ತೀರ್ಥ (ಪೇಜಾವರ ಮಠ).
ಆಚಾರ್ಯರ ಕಿರಿಯ ಸಹೋದರ ವಿಷ್ಣು ತೀರ್ಥರು ಅವರನ್ನು ಸನ್ಯಾಸ ದೀಕ್ಷೆ ನೀಡುವಂತೆ ಪದೇ ಪದೇ ವಿನಂತಿಸುತ್ತಿದ್ದರು. ಆಚಾರ್ಯರ ಮಾತಾಪಿತೃಗಳು ತೀರಿಹೋದಾಗ ವಿಷ್ಣು ತೀರ್ಥರು ಕವನ ತೀರ್ಥಕ್ಕೆ ಬಂದು ಮತ್ತೊಮ್ಮೆ ದ್ವೈತ ಕ್ರಮಕ್ಕೆ ಸೇರ್ಪಡೆಯಾಗುವಂತೆ ಮನವಿ ಮಾಡಿದರು.
ಆಚಾರ್ಯರು ಸೋದೆ ಮಠದ ಜವಾಬ್ದಾರಿಯನ್ನು ವಿಷ್ಣು ತೀರ್ಥರಿಗೆ ಒಪ್ಪಿಸಿದರು. ಈ ಎಲ್ಲಾ ವ್ಯಕ್ತಿಗಳು ಇಂದಿಗೂ ಕಂಡುಬರುವ ಅಶ್ವಥ ವೃಕ್ಷದ ಕೆಳಗೆ ದೀಕ್ಷೆ ಪಡೆದಿದ್ದಾರೆ. ಇಲ್ಲಿ ಪೇಜಾವರ ಮಠವಿದೆ. ಆಚಾರ್ಯ-ಪದ್ಮನಾಭ ತೀರ್ಥರ ನಾಲ್ಕು ಪ್ರಮುಖ ಶಿಷ್ಯರು, ನರಹರಿ ತೀರ್ಥ, ಮಾಧವ ತೀರ್ಥ ಮತ್ತು ಅಕ್ಷೋಬ ತೀರ್ಥರು ಸಹ ಇಲ್ಲಿ ದೀಕ್ಷೆ ಪಡೆದರು. ನಾವು ಮಧ್ವ ವಿಜಯ ಮತ್ತು ಇತರ ಸಮಕಾಲೀನ ಗ್ರಂಥಗಳು ಮತ್ತು ಹೃಕೇಶ ತೀರ್ಥರ ಬರಹಗಳನ್ನು ನೋಡಿದರೆ,  ಮಧ್ವಾಚಾರ್ಯರು ಎರಡನೇ ಬಾರಿ ಬದರಿಯಿಂದ ಹಿಂತಿರುಗಿದ ನಂತರ ಈ ದಾರ್ಶನಿಕರಿಗೆ ದೀಕ್ಷೆ ನೀಡಿದರು ಎಂದು ತೋರುತ್ತದೆ.   
  ಮಾಧ್ವರಿಗೆ ಈ ಸ್ಥಳವು ಮುಖ್ಯವಾಗಲು ಇನ್ನೊಂದು ಕಾರಣವೆಂದರೆ ಆಚಾರ್ಯರು ಅವರು ದ್ವಂದ (ದ್ವಿಗುಣ) ವ್ಯವಸ್ಥೆ ಅಥವಾ ಎರಡು ಮಠ ಪದ್ಧತಿಯ ಬಗ್ಗೆ ಮಾತನಾಡಲು ಅವರು ನೇಮಿಸಿದ ಎಂಟು ಋಷಿಗಳ ಸಭೆಯನ್ನು ನಡೆಸಿದರು.ಕೃಷ್ಣ ದೇವಾಲಯಈ ವ್ಯವಸ್ಥೆಯಲ್ಲಿ ಪರ್ಯಾಯ ದರ್ಶಿಗಳಿಗೆ ಏನಾದರೂ ಸಂಭವಿಸಿದರೆ, ಇತರ ದರ್ಶಕರು ಪೂಜೆಯನ್ನು ವಹಿಸಿಕೊಳ್ಳಬಹುದು. ಈ ವ್ಯವಸ್ಥೆ ಇಂದಿಗೂ ಮುಂದುವರೆದಿದೆ.
ಮಧ್ವಾಚಾರ್ಯರ ಮತ್ತು   ಶಿಷ್ಯರ ಈ ಸಭೆಯು ಕಣ್ವತೀರ್ಥ ಮಠದ ಬಳಿ ಇರುವ ಪೀಪಲ್ ಮರದ ಕೆಳಗೆ ಒಂದು ಸಣ್ಣ ವೇದಿಕೆಯಲ್ಲಿ ನಡೆಯಿತು. ಸಾಗರದ ನೀರು ಶಾಂತವಾಗಿದೆ ಮತ್ತು ಇದು ಗ್ರಹಣ ಅಥವಾ ಗ್ರಹಣ (ಕನ್ನಡ ಪದ) ಸಮಯದಲ್ಲಿ ಅಲ್ಲಿ ಸ್ನಾನ ಮಾಡಿದ ಆಚಾರ್ಯರಿಗೆ ಕಾರಣವಾಗಿದೆ.
ಮಾಧ್ವ ಅಮಾವಾಸ್ಯೆಯಂದು ಸ್ನಾನ ಮಾಡಲು ಸಾಗರಕ್ಕೆ ಹೋದ ದಿನದ ಬಗ್ಗೆ ಮಾಧ್ವ ವಿಜಯವು ನಮಗೆ ಹೇಳುತ್ತದೆ. ಈ ದಿನ ಸೂರ್ಯ ಮತ್ತು ಚಂದ್ರ ಇಬ್ಬರೂ ಒಟ್ಟಿಗೆ ಇರಬೇಕು.
  ಸ್ನಾನ ಮುಗಿಸಿ ಸಮುದ್ರತೀರದಲ್ಲಿ ನಿಂತಿದ್ದ ಯೇಕವಾಟದ ಗ್ರಾಮಸ್ಥರು ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿರುವಂತೆ ದೃಶ್ಯೀಕರಿಸುತ್ತಾರೆ. ನಂತರ ಅವರು ಋಗ್ವೇದ ಮತ್ತು ಐತರೇಯ ಶಾಖೆಯ ಸೂಕ್ತಗಳ ಕುರಿತು ಪ್ರವಚನ ನೀಡಲು ಪ್ರಾರಂಭಿಸಿದರು. ಶೀಘ್ರದಲ್ಲೇ, ಆಚಾರ್ಯರ ಧ್ವನಿಯು ಸಾಗರದ ಘರ್ಜನೆಯನ್ನು ಮುಳುಗಿಸಿತು ಮತ್ತು ಜನರು ಆಚಾರ್ಯರ ಸುತ್ತಲೂ ಸೇರಲು ಪ್ರಾರಂಭಿಸಿದರು.
ಗ್ರಹಣವಾದಾಗ ಸಾಗರದಲ್ಲಿ ಉಬ್ಬರವಿಳಿತ ಉಂಟಾಗುವುದು ಸಹಜ. ಆಗ ಇದು ಹೀಗಿತ್ತು ಆದರೆ ಆಚಾರ್ಯರ ಉಪಸ್ಥಿತಿಯು ಸಾಗರವನ್ನು ಶಾಂತಗೊಳಿಸಿದಂತಿದೆ.









Wednesday, November 2, 2022

Sri Ratnagarbhatirtharu, narala matha, sode mutt yati 12 magha shukla panchami ರತ್ನಗರ್ಭ ತೀರ್ಥರು

 

ಸರ್ವರಿಗೂ  ಶ್ರೀಭೂತರಾಜರ ಅನುಗ್ರಹ ಪ್ರಾಪ್ತಿಯಾಗಲಿ ಎಂದು ಪ್ರಾರ್ಥನೆ.

ಶ್ರೀರತ್ನಗರ್ಭತೀರ್ಥ ಗುರುಭ್ಯೋ ನಮಃ

ಶ್ರೀಭೂತರಾಜಾಯ ನಮಃ

ಪ್ರಕೃತಿ ಮಾತೆಯ ನಡುವೆ ಕಂಗೊಳಿಸುತ್ತಿರುವ ನಾರಾಳ ಕ್ಷೇತ್ರ ಶ್ರೀ ಭೂತರಾಜರ ಅವತಾರ ಭೂಮಿ.ಸುಮಾರು 1400 ದಶಕದಲ್ಲಿ ಮಹಾ ಮಹಿಮರೆಂದು ಪ್ರಸಿದ್ದಿ ಪಡೆದಿದ್ದ ಶ್ರೀಸೋದೆ ವಾದಿರಾಜ ಮಠದ12ನೇ ಯತಿಗಳಾದ ಶ್ರೀರತ್ನಗರ್ಭತೀರ್ಥರ ಕಾಲದ ಮಠ ಇಲ್ಲಿದೆ. ಮಠದಲ್ಲಿ ಶ್ರೀರತ್ನಗರ್ಭತೀರ್ಥರ ಬೃಂದಾವನ, ಶ್ರೀವರಾಹತೀರ್ಥ, ಶ್ರೀಭೂತರಾಜರ ಕೆಲವೊಂದು ಆಭರಣ, ಗಂಟಾಮಣಿ ಹಾಗೂ ಉಯ್ಯಾಲೆ ಇದೆ.ಸದಾ ಸ್ತಬ್ಧವಾಗಿರುವ ಉಯ್ಯಾಲೆಯು ಶ್ರೀಭೂತರಾಜರ ನಡೆ ಉಂಟಾದಾಗ ತೂಗಲು ಆರಂಭಿಸುತ್ತದೆ.

ಸನಾತನ ಯತಿ ಪರಂಪರೆಯ ಸಿದ್ದಿ,ಸಾಧನೆ ತಪಃಶಕ್ತಿ ಊಹೆಗೂ ಮೀರಿದ್ದು.ಇಂತಹ ಅದ್ಭುತ ಸಾಧಕರಲ್ಲಿ ಶ್ರೀಸೋದೆ ವಾದಿರಾಜ ಮಠ ಪರಂಪರೆಯ 12 ನೇ ಯತಿಗಳಾದ ಶ್ರೀರತ್ನಗರ್ಭತೀರ್ಥರ ಮಹಿಮೆಗಂತೂ ಸಾಟಿಯೇ ಇಲ್ಲ.

12 ನೇ ಶತಮಾನದ ಕೊನೆಯ ಕಾಲಘಟ್ಟದಲ್ಲಿ ಶ್ರೀಸೋದೆಮಠದ ಯತಿಗಳಾಗಿ ನೇಮಿತರಾಗಿದ್ದ ಶ್ರೀರತ್ನಗರ್ಭತೀರ್ಥರು ಯೋಗದಲ್ಲಿ ಉತ್ಕೃಷ್ಟ ಸಾಧನೆ ಸಲ್ಲಿಸಿದ ಅಪರೋಕ್ಷ ಜ್ಞಾನಿಗಳು.

ಶ್ರೀರತ್ನಗರ್ಭತೀರ್ಥರು ಜಪ,ತಪ ಪೂಜೆ,ಯೋಗ ಸಾಧನೆಗಳನ್ನು ಸದಾ ಏಕಾಂತ ಪ್ರದೇಶಗಳಲ್ಲೇ ಸಲ್ಲಿಸುತ್ತಿದ್ದರು.ಜನ ವಸತಿ ಸ್ಥಳಗಳಿಂದ ಯಾವಾಗಲೂ ದೂರವಿರಲು ಬಯಸುತ್ತಿದ್ದರು.ಒಮ್ಮೆ ಸಂಚಾರದಲ್ಲಿದ್ದಾಗ ಶ್ರೀರತ್ನಗರ್ಭತೀರ್ಥರು ಮಂಗಳೂರು ಪಟ್ಟಣದಿಂದ 18 ಮೈಲು ದೂರದಲ್ಲಿರುವ ನಾರಾಳ ಎಂಬ ಹಳ್ಳಿಯನ್ನು ಕಂಡರು.ವನಸಿರಿಯ ನಡುವೆ ಕಂಗೊಳಿಸುತ್ತಿದ್ದ ಪ್ರದೇಶದಲ್ಲಿ ಅದೃಶ್ಯ ರೂಪದಲ್ಲಿರುವ ದೇವತಾ ಸನ್ನಿಧಾನ ಶ್ರೀಪಾದರ ದಿವ್ಯದೃಷ್ಟಿಗೆ ಗೋಚರವಾಗಿ ಅವರನ್ನು ಸೆಳೆಯಿತು.ತಮ್ಮ ಆರಾಧ್ಯದೇವರಾದ ಶ್ರೀಭೂವರಾಹದೇವರನ್ನು ಸ್ಮರಿಸಿ ಅದೇಸ್ಥಳದಲ್ಲಿ ತಂಗಿದ ಶ್ರೀಪಾದರು ನಿತ್ಯನೈಮಿತ್ತಿಕ ಜಪ,ತಪ,ಪೂಜೆಗಳನ್ನು ಅಲ್ಲೇ ಸಲ್ಲಿಸಲು ಆರಂಭಿಸಿದರು.

ಶ್ರೀರತ್ನಗರ್ಭತೀರ್ಥರು ಹಲವಾರು ವರ್ಷಗಳಿಂದ ಪ್ರತಿನಿತ್ಯ

ಸೂರ್ಯೋದಯಕ್ಕೂ ಪೂರ್ವದಲ್ಲೇ ತಮ್ಮ ಪ್ರಾತಃರ್ವಿಧಿಗಳನ್ನು ಪೂರೈಸಿ ಧ್ಯಾನನಿರತರಾಗುತ್ತಿದ್ದರು. ಸೂರ್ಯೋದಯವಾಗಿ ಸೂರ್ಯದೇವನು ಮೇಲೇರುತ್ತಿದ್ದಂತೆ

ಶ್ರೀರತ್ನಗರ್ಭತೀರ್ಥರೂ ಕೂಡಾ ತಮ್ಮ ಯೋಗಬಲದಿಂದ ಭೂಮಿಯಿಂದ ಮೇಲೆದ್ದು ಗಾಳಿಯಲ್ಲಿ ಪದ್ಮಾಸನದಲ್ಲಿ ತೇಲುತ್ತಾ ಮೆಲ್ಲನೆ ಮೇಲಕ್ಕೆರುತ್ತಿದ್ದರು.ಸುಮಾರು 30ಅಡಿ ಎತ್ತರಕ್ಕೆ ಏರಿ ಹಲವುಗಂಟೆಗಳ ಕಾಲ ಗಾಳಿಯಲ್ಲೇ ತೇಲುತ್ತಾ ಉಗ್ರತಪಸ್ಸಿನಲ್ಲಿ ನಿರತರಾಗುತ್ತಿದ್ದರು.

ಮಧ್ಯಾಹ್ನವಾಗುತ್ತಿದ್ದಂತೆ ಭೂಮಿಗೆ ಇಳಿದು ಪೂಜೆಸಲ್ಲಿಸಿ ಭಿಕ್ಷೆ ಸ್ವೀಕರಿಸುತ್ತಿದ್ದರು.

ಇದೇ ಸಂದರ್ಭದಲ್ಲಿ

ಮೂಡುಬಿದ್ರೆ ಸಮೀಪದ ಪುತ್ತಿಗೆಯ ಚೌಟ ಅರಸುಸಂಸ್ಥಾನಕ್ಕೆ ಸುಳ್ಯದ ಅರಸು ಸಂಸ್ಥಾನವು ಏನಾದರೊಂದು ನೆಪಒಡ್ಡಿ ಕೆಣಕಿ ಅವಮಾನಿಸುತ್ತಿತ್ತು. ನಿರಂತರ ಜರಗುತ್ತಿದ್ದ ಉಪಟಳದಿಂದ ಪುತ್ತಿಗೆಯ ಅರಸುಸಂಸ್ಥಾನ ಸುಸ್ತಾಗಿ ಹೋಗಿತ್ತು.ದುರದೃಷ್ಟವಶಾತ್ ಸುಳ್ಯದ ಅರಸರ ಪಡೆ ಬಹು ಬಲಾಡ್ಯವಾಗಿತ್ತು. ಪುತ್ತಿಗೆಯ ಚೌಟರ ಅರಸರ ಪಡೆಗಿಂತ ಸುಳ್ಯಅರಸು ಸಂಸ್ಥಾನದಲ್ಲಿ ಹತ್ತುಪಟ್ಟು ಹೆಚ್ಚು ಆನೆ,ಕುದುರೆ ಹಾಗೂ ಸೈನಿಕರಿದ್ದರು.ಹೀಗಾಗಿ ಪುತ್ತಿಗೆಯ ಸೇನಾಪಡೆಗೆ ಸುಳ್ಯದ ಅರಸರನ್ನು ಸೋಲಿಸುವುದು ಕನಸಿನ ಮಾತಾಗಿತ್ತು.ಆದರೆ ದಿನಕಳೆದಂತೆ ಸುಳ್ಯಸಂಸ್ಥಾನದ ಉಪಟಳ ಹೆಚ್ಚಾಯಿತು.ಮಾಡು ಇಲ್ಲವೇ ಮಡಿ ಎಂಬ ನಿರ್ಧಾರಕ್ಕೆ ಬಂದ ಪುತ್ತಿಗೆಯ ಅರಸನು ತನ್ನಲ್ಲಿರುವ ಪುಟ್ಟ ಸೇನಾಪಡೆಯೊಂದಿಗೆ ಸುಳ್ಯ ಸಂಸ್ಥಾನದ ವಿರುದ್ಧ ಯುದ್ಧಕ್ಕೆ ಸನ್ನದ್ಧನಾಗಿ ಸುಳ್ಯದತ್ತ ಹೊರಟ.

ಯುದ್ದ ನಿಮಿತ್ತ ಸೇನಾಪಡೆ ಸಮೇತನಾಗಿ ಪುತ್ತಿಗೆಯ ಅರಸನು ನಾರಾಳ ಪ್ರದೇಶವನ್ನು ಹಾದುಹೋಗುತ್ತಿದ್ದ. ಸಮಯದಲ್ಲಿ ಅರಣ್ಯದ ನಡುವೆ ಬೃಹತ್ ವೃಕ್ಷಗಳಿಗಿಂತಲೂ ಎತ್ತರದಲ್ಲಿ ಗಾಳಿಯಲ್ಲಿ ತೇಲುತ್ತಾ ತಪಸ್ಸನ್ನು ಆಚರಿಸುತ್ತಿದ್ದ ಶ್ರೀರತ್ನಗರ್ಭತೀರ್ಥರನ್ನು ಕಂಡು ದಂಗಾದ. ಶ್ರೀಪಾದರು ಭೂಮಿಗೆ ಇಳಿಯುವುದನ್ನು ಕಾಣಲು ಅರಸನು ಕಾತರನಾಗಿದ್ದ.ತನ್ನ ಸಮಸ್ಯೆಯನ್ನು ಇಂತಹ ತಪಸ್ವಿಗಳಲ್ಲಿ ತಿಳಿಸಿ ಅವರ ಆಶೀರ್ವಾದ ಸಲಹೆ ಸ್ವೀಕರಿಸಿ ಆನಂತರ ಯುದ್ದಭೂಮಿಗೆ ಸಾಗೋಣ ಎಂದು ನಿರ್ಧರಿಸಿದ.

ಶ್ರೀರತ್ನಗರ್ಭತೀರ್ಥರು ಧ್ಯಾನ ಪೂರೈಸಿ ಭೂಮಿಗೆ ಇಳಿಯುತ್ತಿದ್ದಂತೆ ಪುತ್ತಿಗೆಯ ಅರಸನು ಶ್ರೀಪಾದರ ಬಳಿ ಬಂದು ಶರಣುಹೋದ.ತನ್ನ ಸಂಸ್ಥಾನಕ್ಕೆ ಒದಗಿರುವ ನೋವನ್ನು ತೋಡಿಕೊಂಡು ರಕ್ಷಿಸುವಂತೆ ಕೇಳಿಕೊಂಡ.

ಯತಿಗಳುದಿವ್ಯದೃಷ್ಟಿಯಿಂದ ವಿಷಯವನ್ನರಿತು ಅಭಯ ನೀಡಿದರು.

ಮಂತ್ರಾಕ್ಷತೆ ಕೊಟ್ಟು ಹರಸಿ ತಾವು ನಿತ್ಯ ಪೂಜೆ ಸಲ್ಲಿಸುತ್ತಿದ್ದ ಭೂಭಾಗದ ಪಕ್ಕದಿಂದ ಮೂರು ಕಲ್ಲನ್ನು ತಮ್ಮ ಅಮೃತಹಸ್ತದಿಂದ ಪಡೆದುಕೊಂಡರು.ವಿಶೇಷ ಮಂತ್ರಗಳನ್ನು ಪಠಿಸಿ ತಮ್ಮ ಆರಾಧ್ಯಮೂರ್ತಿ ಶ್ರೀಭೂವರಾಹ ದೇವರನ್ನು ಸ್ಮರಿಸಿದರು.ತದನಂತರ ಶ್ರೀಪಾದರು ಮೂರೂ ಕಲ್ಲುಗಳನ್ನು ಚೌಟಅರಸನಿಗೆ ಅನುಗ್ರಹಿಸಿದರು.ಜೊತೆಗೆ

ಗೌಪ್ಯವಾಗಿ ಕೆಲವು ಮಾಹಿತಿಗಳನ್ನು ಅರಸನಿಗೆ ಹೇಳಿದರು.ಶ್ರೀಪಾದರ ಉಪದೇಶದಿಂದ ಪುತ್ತಿಗೆ ಅರಸನಿಗೆ ವಿಶೇಷ ಆತ್ಮವಿಶ್ವಾಸ ಪ್ರಾಪ್ತಿಯಾಗಿತ್ತು.ಶ್ರೀಪಾದರ ಪವಿತ್ರಪಾದಗಳಿಗೆ ವಂದಿಸಿ ದುಪ್ಪಟ್ಟು ಹುಮ್ಮಸ್ಸಿನಿಂದ ಯುದ್ದಭೂಮಿಗೆ ಧಾವಿಸಿದ.

ಪುತ್ತಿಗೆಚೌಟರ ಸೇನಾಪಡೆಗಿಂತ ಹತ್ತುಪಟ್ಟು ಹೆಚ್ಚಿನ ಸೇನಾಪಡೆ ಹೊಂದಿದ್ದ ಸುಳ್ಯದ ಸೇನಾಪಡೆ ಭಾರೀ ಘೋಷಣೆ,ಸದ್ದಿನೊಂದಿಗೆ ಯುದ್ದಭೂಮಿಗೆ ಬಂದಿಳಿಯಿತು.

ಸುಳ್ಯದ ಸೇನಾಪಡೆಯ ಅಬ್ಬರ ಕಂಡು ಪುತ್ತಿಗೆ ಸೇನಾಪಡೆಯ ಜಂಘಾಬಲವೇ ಉಡುಗಿ ಹೋಯಿತು.ಸುಳ್ಯದ ಸೇನಾಪಡೆಯು ಇಡೀ ರಣಭೂಮಿಯ ಉದ್ದಗಲಕ್ಕೆಲ್ಲಾ ಹರಡಿಕೊಂಡಿತ್ತು.

ಯುದ್ಧ ಆರಂಭಕ್ಕೆ ಕ್ಷಣಗಣನೆಯಾಗುತ್ತಿತ್ತು.

ರಣಕಹಳೆ ಮೊಳಗುತ್ತಿದ್ದಂತೆ ಪುತ್ತಿಗೆ ಅರಸನು ಶ್ರೀರತ್ನಗರ್ಭತೀರ್ಥರನ್ನು ಭಕ್ತಿಯಿಂದ ಸ್ಮರಿಸಿಕೊಂಡ.ನಾರಾಳದಲ್ಲಿ ಶ್ರೀರತ್ನಗರ್ಭತೀರ್ಥರು ಮಂತ್ರಿಸಿ ನೀಡಿದ್ದ ಮೂರು ಕಲ್ಲುಗಳಲ್ಲಿ ಎರಡು ಕಲ್ಲುಗಳನ್ನು ತನ್ನ ಜೋಳಿಗೆಯಿಂದ ಹೊರತೆಗೆದನು.ಯತಿಗಳು ಗೌಪ್ಯವಾಗಿ ತಿಳಿಸಿದಂತೆ ಒಂದು ಕಲ್ಲನ್ನು ಹಿಂದೆ ಎಸೆದನು.ಇನ್ನೊಂದನ್ನು ಮುಂದೆ ಎಸೆದನು.ಯತಿಗಳು ನೀಡಿದ ಕಲ್ಲು ಯುದ್ದಭೂಮಿಯ ಮೇಲೆ ಬೀಳುತ್ತಿದ್ದಂತೆ ಅಲ್ಲೊಂದು ದೊಡ್ಡ ಪವಾಡವೇ ಜರಗಿತು.ನೋಡು ನೋಡುತ್ತಿದ್ದಂತೆಯೇ ರಣಭೂಮಿ ಅಲ್ಲೋಲ ಕಲ್ಲೋಲವಾಯಿತು.ಏಕಕಾಲದಲ್ಲಿ ಸಿಡಿಲುಗುಡುಗುಗಳು ಯುದ್ದಭೂಮಿಗೆ ಅಪ್ಪಳಿಸಿದಂತಹ ಸದ್ದು.ಪುತ್ತಿಗೆಅರಸರ ಪುಟ್ಟಸೇನಾಪಡೆಯನ್ನು ಹೆಡೆಮುರಿ ಕಟ್ಟಲು ಬಂದಿದ್ದ ಸುಳ್ಯದ ಅರಸರ ವಿರಾಟ್ ಸ್ವರೂಪದ ಸೇನಾಪಡೆಯು ಯುದ್ದಭೂಮಿಯ ದೃಶ್ಯ ಕಂಡು ಕಂಗಲಾಯಿತು.ಸಾವಿರಾರು ದೈತ್ಯಗಾತ್ರದ ಶ್ವೇತವರ್ಣದ ವರಾಹಗಳು ಎಲ್ಲೆಂದರಲ್ಲಿ ಪ್ರತ್ಯಕ್ಷವಾದವು.ಸಂಪೂರ್ಣವಾಗಿ ಯುದ್ದಭೂಮಿಯನ್ನು ಅವು ಸುತ್ತುವರಿದವು.ಕಣ್ಣರೆಪ್ಪೆ ಮಿಟುಕಿಸುವಷ್ಟರಲ್ಲಿ

ಮಿಂಚಿನವೇಗದಲ್ಲಿ ಘೀಳಿಡುತ್ತಾ ಬಂದ ವರಾಹಗಳು ಸುಳ್ಯದ ಅರಸರ ಸೇನಾಪಡೆಯ ಮೇಲೆ ಉಗ್ರವಾಗಿ

ಎರಗಿದವು.ಘೋರ ಕಾಳಗಕ್ಕೆ ಸನ್ನದ್ಧವಾಗಿ ಬಂದಿದ್ದ ಸುಳ್ಯದ ಅರಸರ ಬೃಹತ್ ಸೇನಾಪಡೆಯು ವರಾಹಪಡೆಯ ಅನಿರೀಕ್ಷಿತ ದಾಳಿಗೆ ಕಂಗಾಲಾಗಿ ದಿಕ್ಕಾಪಾಲಾಗಿ ಹೋಯಿತು.ಧೀರ ಸೈನಿಕರಿಗೆ ಹೆಸರಾಗಿದ್ದ ಸುಳ್ಯದ ಸೈನಿಕರು ವರಾಹಗಳ ಆರ್ಭಟಕ್ಕೆ ಬೆದರಿ ಸಿಕ್ಕಸಿಕ್ಕಲ್ಲಿ ಓಡಿದರು.ಆನೆ ಕುದುರೆಗಳು ತಮ್ಮ ಮೇಲಿದ್ದ ಸವಾರರನ್ನು ನೆಲಕ್ಕೆ ಎಸೆದು ಪರಾರಿಯಾದವು.ರಣಭೂಮಿಯಲ್ಲಿ ಏಕಕಾಲದಲ್ಲಿ ಸಾವಿರಾರು ವರಾಹಗಳ ದರ್ಶನ.ಬಹುಶಃ ಭಾರತದೇಶದ ಇತಿಹಾಸದಲ್ಲಿ ಹಿಂದೆಂದೂ ಸಂಭವಿಸಿದ ಅಪರೂಪದ ಅಪೂರ್ವ ಯುದ್ದ ಸುಳ್ಯದ ಯುದ್ದಭೂಮಿಯಲ್ಲಿ ಜರಗಿತ್ತು.

ಅನಿರೀಕ್ಷಿವಾದ ಧಾಳಿಯಿಂದ ಬೆಚ್ಚಿಬಿದ್ದ ಸುಳ್ಯದ ಅರಸನು ನೆಲಕಚ್ಚಿದ.ಪುತ್ತಿಗೆಯ ಚೌಟ ಅರಸರಿಗೆ ಶರಣಾಗಿ ತನ್ನ ತಪ್ಪಿಗೆ ಕ್ಷಮೆಯಾಚಿಸಿದ.

ಪುತ್ತಿಗೆಅರಸರ ವಿಜಯದುಂದುಭಿ ಮೊಳಗುತ್ತಿದ್ದಂತೆ ಯುದ್ದಭೂಮಿಯಲ್ಲಿದ್ದ ವರಾಹಗಳು ಒಂದೊಂದಾಗಿ ಅದೃಶ್ಯವಾದವು.ಯುದ್ದ ಆರಂಭವಾಗಿ ಕೆಲ ತಾಸುಗಳಲ್ಲಿ ಪುತ್ತಿಗೆಯ ಅರಸನು ವಿಜಯಗಳಿಸಿದ. ಒಂದೆರಡು ದಿನಗಳಲ್ಲೇ ಮತ್ತೆ ಪುತ್ತಿಗೆಗೆ ಮರಳಿದ.

ತನ್ನ ವಿಜಯಕ್ಕೆ ಕಾರಣರಾದ ಶ್ರೀರತ್ನಗರ್ಭತೀರ್ಥರ ಬಳಿ ಓಡೋಡುತ್ತಾ ಬಂದು ಅವರ ಪಾದಕಮಲಗಳಿಗೆ ಆನಂದಭಾಷ್ಪ ಸುರಿಸುತ್ತಾ ನಮಿಸಿದ.

ಸುಳ್ಯದ ಅರಸರ ಶೋಷಣೆ ಹಾಗೂ ಉಪಟಳದಿಂದ ಪುತ್ತಿಗೆ ಸಂಸ್ಥಾನವನ್ನು ರಕ್ಷಿಸಿದ್ದಕ್ಕಾಗಿ ಶ್ರೀರತ್ನಗರ್ಭತೀರ್ಥರ ಸಂಸ್ಥಾನಕ್ಕೆ ಹತ್ತಾರು ಮೈಲು ವಿಸ್ತೀರ್ಣದ ಭೂಮಿ ಹಾಗೂ ಅಪಾರ ಕಾಣಿಕೆಗಳನ್ನು ಅರ್ಪಿಸಿದ.

ಕೆಲವರ್ಷಗಳಲ್ಲೇ ಪುತ್ತಿಗೆ ಅರಸರ ಸಾಮ್ರಾಜ್ಯಕ್ಕೆ ಜಲಕ್ಷಾಮ ಬಂದಿತು.

ಪುತ್ತಿಗೆಅರಸನು ಮತ್ತೆ ಶ್ರೀರತ್ನಗರ್ಭತೀರ್ಥರಿಗೆ ಮೊರೆಹೋದ.ಶ್ರೀಗಳು ತಮ್ಮ ದಿವ್ಯಶಕ್ತಿಯಿಂದ ವರಾಹದೇವರ ಮುಖಾಂತರ ತೀರ್ಥಕುಂಡ ಹಾಗೂ ಬಲುದೊಡ್ಡ ನೀರಿನ ಚಿಲುಮೆ ಸೃಷ್ಟಿಸಿ ಜಲಕ್ಷಾಮ ನಿವಾರಿಸಿದರು.

ವರಾಹದೇವರು ಎದ್ದು ಬಂದ ಕುಂಡಕ್ಕೆ ವರಾಹತೀರ್ಥ ಎಂಬ ಹೆಸರು ಬಂದಿತು.

ವರಾಹವು ನಡೆದಾಡಿದ ಸ್ಥಳದಲ್ಲಿ ಸೃಷ್ಟಿಯಾದ ಬಹುದೊಡ್ಡ ನೀರಿನ ಚಿಲುಮೆಯು ಕನ್ಯಾತೀರ್ಥವೆಂದು ಪ್ರಸಿದ್ಧವಾಯಿತು.ಮುಂದೆ 15ನೇ ಶತಮಾನದಲ್ಲಿ ಶ್ರೀಭೂತರಾಜರೂ ಕೂಡಾ ನಾರಾಳದ ಪುಣ್ಯಭೂಮಿಯಲ್ಲೇ ಅವತರಿಸಿದರು.

 ಶ್ರೀರತ್ನಗರ್ಭತೀರ್ಥರ ಘಟನೆಯು ಕೇವಲ ಮಠ ಪರಂಪರೆಯ ಪುಟಗಳಲ್ಲಿ ದಾಖಲಾಗಿದ್ದು ಮಾತ್ರವಲ್ಲ,ತೌಳವ ಇತಿಹಾಸದಲ್ಲೂ ಇದೆ. ಕುರಿತ ಮೌಖಿಕ ಪರಂಪರೆಯ ಕಥೆಗಳಂತೂ ಇನ್ನಷ್ಟು ರೋಚಕವಾಗಿದೆಅಸಾಧ್ಯ,ಅದ್ಭುತ ಎನ್ನುವಂತಹಸಿದ್ದಿಸಾಧನೆಗಳಿಂದ ಪ್ರಸಿದ್ಧರಾಗಿರುವ ಮಹಾತಪಸ್ವಿ